Poem

ನೀನೇ ಶಿಕ್ಷಿಸು

ಅಗೋ ನೋಡು ಮುಳುಗುತಿದೆ
ನನ್ನ ದೇಶವು
ಜಾತಿ ಎಂಬ ಮಾರಿಯಿಂದ
ದೇಶನಾಶವು

ಜಾತಿಯನ್ನ ಅಳಿಸಲೆಂದು
ಅವರು ದುಡಿದರು
ಜಾತಿ ಕೂಸದಿಂದ ತಾನೇ
ಆವರು ಮಡಿದರು

ಬುದ್ಧ ಬಸವಾದಿಗಳು
ಜಾತಿ ತೊರೆದರು
ಅವರ ಹೆಸರಲ್ಲೇ
ಧರ್ಮವಾ ಕಟ್ಟಿ ಮೆರೆದರು

ಯಾರು ಇಲ್ಲಿ ಮೇಲು
ಹೇಳು ಭರತ ಮಾತೆಯೇ
ನಿನ್ನ ಮೇಲು ಚಲ್ಲಿತೇ
ಧರ್ಮ ಛಾಯೆಯೇ

ಹಿಂದು, ಬೌದ್ಧ, ಜೈನ
ಮುಸ್ಲಿಂ, ನಿನ್ನ ಮಕ್ಕಳು
ನಿನ್ನ ಮಡಿಲ ಕುಡಿಗಳೆಲ್ಲಾ
ಈ ದೇಶ ಪ್ರಜೆಗಳು

ಮುಳುಗುತಿರುವ ದೇಶವನ್ನು
ನೀನು ರಕ್ಷಿಸು
ಜಾತಿವಾದಿಗಳನು ತಾಯೇ
ನೀನೇ ಶಿಕ್ಷಿಸು

- ವೆಂಕಟೇಶ್ ಕ್ಷತ್ರಿಯ

 

ವಿಡಿಯೋ
ವಿಡಿಯೋ

ವೆಂಕಟೇಶ್ ಕ್ಷತ್ರಿಯ

ವೆಂಕಟೇಶ್ ಕ್ಷತ್ರಿಯ ಅವರು ಮೂಲತಃ ಹೂವಿನಹಡಗಲಿವರು. ಕವನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author