Poem

ನಿನ್ನ ನಗೆ ಕಂಡಾಗ 

ಚೆಲುವೆ ನಿ ಎಲ್ಲಿರುವೆ ಮನದ ಓ ಅರಸಿಯೇ
ಅಂತರಾಳದಲಿ ಬೆರೆಯಲು ಬೆರೆತು ಒಂದಾಗಲೂ
ಮಧುರ ತುಂಬಿದ ಮನದಂಗಳದಲಿ
ಹೃದಯದ ಭಾವನೆಯನ್ನು ಹೊರ ದುಡೊಣ

ನಿನ್ನ ನಗೆ ಕಂಡಾಗ ನಾ‌ ಸೋತು ಹೋದೆ
ನಿನ್ನಲ್ಲೇ ನಾನು ಅವಿತು ನನ್ನೇ ನಾ ಮರೆತೆ
ಬಾನು ಭೂವಿಯ ಆಚೆಯಲಿ ನಾವು ಒಂದಾಗಿರುವ
ಒಂಟಿತನವ ದೂರ ಮಾಡಿ ಇಬ್ಬರು ಜಗವನು ಮರೆವಾ
ಹೊಸ ಬಾಳ ಹಾದಿಯಲಿ ನವಗೀತೆಯ ಹಾಡುವ

ಓ ಗೆಳತಿ ನಿ ಹೇಳು ನಿನ್ನೊಲವು ನಾನೆಂದು
ಮನಸ್ಸನ್ನು ಕದ್ದು ಗೆದ್ದು ಹೋದ ಕಳ್ಳಿ ನಿನೆಂದು
ಸಪ್ತ ಸಾಗರದಾಚೆಯಲಿ ನಾದ ಗೀತೆಯಲ್ಲಿ ಕುಣಿದು
ಅಂತರಂಗದ ಹಾವ ಭಾವಗಳ ಮೆಲ್ಲನೆ ಸವಿದು
ನಾ ಹಾಡುವ ಹಾಡಿಗೆ ನಿ ಬಂದು ಶೃತಿಯಾಗು

- ಕಿರಣ ಡಿ ಕಳಸಾ ಗುಡೂರ

ಕಿರಣ ಡಿ. ಕಳಸ

ಕವಿ ಕಿರಣ ಡಿ. ಕಳಸ ಅವರು ಮೂಲತಃ ಬಾಗಲಕೋಟ ಜಿಲ್ಲೆಯ ಗುಡೂರ ಗ್ರಾಮದವರು. ಪ್ರಸ್ತುತ ಕೋ ಅಪ್ ಕ್ರೆಡಿಟ್ ಸೊಸೈಟಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕವಿತೆ, ಬರಹಗಳು ವಿವಿಧ ಪತ್ಕಾರಿಕೆಗಳಲ್ವ್ಯಲಿ ಬೆಳಕು ಕಂಡಿವೆ. 

 

More About Author