Poem

ನಿತ್ಯ ಸಂಜೀವಿನಿ

ಅಮ್ಮನಿಗೀಗ ತುಂಬಾ ಪುರುಸೊತ್ತು
ತಲೆ ಸವರಿ ದೇಖರೇಕೆ ವಿಚಾರಿಸಿ
ಹೂ ಮುತ್ತ ನೀಡುವಳು
ನಿತ್ಯ ಕನಸಿನಲ್ಲಿ ಬಂದು.

ಕಣ್ಮನ ತಂಪಾಗಿಸಿ
ಸುಖ ನಿದ್ದೆ ಭರಿಸುವ ಅಮ್ಮನಿಗೆ
ಇದುವರೆಗೂ ಬದುಕಿರುವ ನಾನು
ಏನು ಕೊಟ್ಟೇನು?

ಊಹೂಂ, ಸಾಧ್ಯವೇ ಇಲ್ಲ
ಏನು ಕೊಟ್ಟರೂ ಋಣ ತೀರಿಸಲಾಗದು
ಅಮ್ಮ ಎಂದರೆ ಎಲ್ಲರಿಗೂ ಹಾಗೆ
ನಿತ್ಯ ಸಂಜೀವಿನಿ.

ಜೀವಿತಾವಧಿ ಮುಗಿಯುವವರೆಗೂ
ನಿತ್ಯ ಶಿರಬಾಗಿ ಪಾದಸ್ಪರ್ಷ ಮಾಡಿ
ಕರ ಮುಗಿದು ನಮಿಸುತ್ತಿದ್ದರೆ
ಅದೇ ತೃಪ್ತಿ ನನಗೆ.

ಎಡೆಬಿಡದೆ ನೆನಪಾಗುವಳು ಅಮ್ಮ
ಅಮ್ಮಾ ಎಂದು ಜೋರಾಗಿ ಕೂಗಿ ಬಿಡಲೇ....

-ಗೀತಾ ಜಿ ಹೆಗಡೆ ಕಲ್ಮನೆ

ಗೀತಾ ಜಿ ಹೆಗಡೆ ಕಲ್ಪನೆ

ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.

ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ) 

More About Author