Poem

ಪ್ರೀತಿ ಮತ್ತು ದೋಣಿ

ಕಣ್ಣಂಚಿನಲ್ಲೇ ಹೂ ನಗೆಯ ಚೆಲ್ಲಿ
ಪ್ರೀತಿಯ ಸಾಗರಕ್ಕೆ ಕರೆತಂದೆ ನೀನು
ಅದೇನು ಸೆಳೆತವೋ ಸುಳಿಯೇ
ಅರಿಯದೆ ಹೆಜ್ಜೆ ಹಾಕಿದೆ ನಾನು

ಮೃದು ಮಾತುಗಳ ಸೌದ ಕಟ್ಟಿ
ಕೈಬಿಡೆನೆಂಬ ವಚನಕೊಟ್ಟು
ಪ್ರೀತಿ ದೋಣಿಯಲ್ಲಿ ಕುಳ್ಳಿರಿಸಿದೆ
ಅಲ್ಲಿದ್ದವರು ನಾನು ಮತ್ತು ನೀನು

ಬಹುದೂರ ಸಾಗಿದ್ದೆವು ನಮ್ಮದೇ ಲೋಕದಲ್ಲಿ
ಪ್ರೀತಿ ಹೊರತು ನಮಗೇನು ಬೇಕಿರಲಿಲ್ಲ
ಅದೇಕೊ ದೋಣಿ ಅಲ್ಲಾಡಿತು
ಜಾತಿ ಮತವೆಂಬ ಸುಳಿಗೆ ಸಿಲುಕಿ

ಪ್ರೀತಿಯ ಹುಟ್ಟು ಹಾಕಿದವನೆ ಆ ಸುಳಿಗೆ ಸಿಲುಕಿ ಹೆದರಿ
ನಾವೆಯನ್ನು ಹಿಂದೆ ತಿರುಗಿಸಿದ
ಮುಂದೆ ಸಾಗಲು ಗೋಗರೆದರು ಕೇಳದೆ
ಪ್ರಶ್ನೆ ಕೇಳಿದೆ ಅವನಿಗೆ

ಇಷ್ಟೆನೋ ಪ್ರೀತಿ ದಡವ ಸೆರೆದ ಪ್ರೇಮದ ಅರಮನೆಗೆ ಹೋಗದೆ
ಅವನೆಂದ ಪ್ರೀತಿಗಿಂತ ಜೀವ, ಜೀವನ ದೊಡ್ಡದು
ನೆನಪುಗಳ ಮಟ್ಟ ಹಾಖಿ ಮತ್ತೊಂದು ದೋಣಿ ಸೇರಿಕೊ

ಆ ಸುಳಿಗೆ ಸಿಲುಕಿದ ದೋಣಿಯು
ಮೌನದ ಪುಟಗಳ ಸೇರಿದೆ
ಕಾಲಗತಿಸಿದರೂ ಹಾಳೆ ಕೀಲಲಾಗುತ್ತಿಲ್ಲ.
ಹಾಗಾಗ ತೆರೆಯುತ್ತದೆ ಮನ ಕದಡುತ್ತದೆ.

-ಗಂಗಾದೇವಿ ಚಕ್ರಸಾಲಿ

ಗಂಗಾದೇವಿ ಚಕ್ರಸಾಲಿ

ಗಂಗಾದೇವಿ ಚಕ್ರಸಾಲಿ ಅವರ ಒಲವಿನ ಕ್ಷೇತ್ರ ಸಾಹಿತ್ಯ. ಕವನ, ಕತೆ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಅವರು ಕವನ ವಾಚನವನ್ನು ಮಾಡುತ್ತಾರೆ.

More About Author