Poem

ಪ್ರೀತಿಯ ಅಂತರ ಅಷ್ಟೇ ಇದೆ

ನಾನು ಗರ್ಭದಲ್ಲಿ ಇದ್ದಾಗಲೇ
ಕರೆಯುತ್ತಿದ್ದಾರೆಲ್ಲರೂ ಅಮ್ಮನನ್ನು
ತಾಯಿಯಾಗುತ್ತಿದ್ದಾಳೆಂದು

ಕಾಲು ಚಾಚಿ ಮಾತನಾಡಿಸುತ್ತಿದ್ದೆ
ಅವಳ ಬಿಡುವಿಲ್ಲದ ಕೆಲಸದ ನಡುವೆ
ನನ್ನ ಕೂಗು ಹೇಗೆ ಗೊತ್ತಾಗುತ್ತಿತ್ತು
ನೋವು ಕೊಡದೆ ಹೊರಬಂದೆ ನಾ

ಕೆಲ ತಿಂಗಳು
ಅವಳಿಗೂ ಸಂಭ್ರಮವೇ
ಹಾಲುಣಿಸಿ ಮುದ್ದಾಡಿದ ಅವಷ್ಟೇ
ಸುವರ್ಣ ಘಳಿಗೆ

ಮತ್ತೆ ಅವಳಿಗೆ ಕೆಲಸ ಕರೆ
ನಮ್ಮಿಬ್ಬರ ಭೇಟಿ ಕೆಲಗಂಟೆ ಅಷ್ಟೆ
ಅದು ಔಪಚಾರಿಕ ಭೇಟಿಯಂತೆ
ಶಾಲೆ, ಕಾಲೇಜು ವಿದ್ಯಾಭ್ಯಾಸ
ಆ ನಡುವೆ ಹಾಸ್ಟೆಲ್ ಸಹವಾಸ

ಪದವಿ ಪಡೆದೆ ನೌಕರಿ ಹಿಡಿದೆ
ಅಮ್ಮ ಮನೆಯಲ್ಲಿದ್ದಾಳೆ
ನಾನು ದುಡಿಯುತ್ತಿದ್ದೇನೆ
ದುಡಿಯುವ ಕೈಗಳು ಬದಲಾಗಿವೆಯಷ್ಟೇ
ಆದರೆ ತಾಯಿ ಮಗುವಿನ ಪ್ರೀತಿ ಅಂತರ ಅಷ್ಟೇ ಇದೆ.

- ಗಂಗಾದೇವಿ ಚಕ್ರಸಾಲಿ

 

ವಿಡಿಯೋ
ವಿಡಿಯೋ

ಗಂಗಾದೇವಿ ಚಕ್ರಸಾಲಿ

ಗಂಗಾದೇವಿ ಚಕ್ರಸಾಲಿ ಅವರ ಒಲವಿನ ಕ್ಷೇತ್ರ ಸಾಹಿತ್ಯ. ಕವನ, ಕತೆ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಅವರು ಕವನ ವಾಚನವನ್ನು ಮಾಡುತ್ತಾರೆ.

More About Author