Poem

ಪ್ರೇಮವೆಂದರೆ!!

ಜಗವೆಲ್ಲಾ ಮಲಗಿರಲು
ತಾನೊಬ್ಬಳೆದ್ದು, ಒದೆಯುತ್ತಿರುವ ಹೊದಿಕೆಯನ್ನು
ಮಗುವಿಗೆ ಮತ್ತೆ ಮತ್ತೆ ಹೊದಿಸುವ ತಾಯಿಯ ಮಮತೆ

ಮುಂದೆಂದೋ ಜರುಗುವ ಮಕ್ಕಳ ಮಹತ್ವಾಕಾಂಕ್ಚೆಗೆ
ಇಂದಿನಿಂದಲೇ ಏದುಸಿರು ಬಿಟ್ಟು
ಉಸಿರು ಊದುವ ತಂದೆಯ ರಕ್ಷೆ

ಕಣ್ಣೀರ ಜೀವಿಗಳಿಗೆ ಬೆಳಕ ತೋರಲು
ಪ್ರಾಣ ಪಣವೊಡ್ಡಿ ಮೊದಲ
ಹೆಜ್ಜೆ ಇರಿಸುವ ಮಹಾತ್ಮನ ಗುರಿ

ಚೆಲ್ಲಾಪಿಲ್ಲಿಯಾಗಿ, ತತ್ತರಿಸಿ
ದಶದಿಕ್ಕುಗಳಿಗೆ ಮುಖಮಾಡುವ, ದೆಸೆಯಿಲ್ಲದ ಮನಗಳ
ಒಟ್ಟುಗೂಡಿಸಿ ನಡೆಸುವ ಪರಿ

ಎಲ್ಲರ ಒಳಗೊಳ್ಳುವಿಕೆ
ತಹತಹಿಸಿ, ಏರು ದಿಬ್ಬಗಳ ಹತ್ತಿ ಇಳಿದು
ತಬ್ಬಿಕೊಳ್ಳುವ ಮನ

ತನ್ನೊಡನೆ ಮುಳುಗುತ್ತಿರುವ ಜೀವಿಗಳ
ಮೊದಲು ದಡಕೆ ಸೆಳೆದು,
ಕೊನೆಗೆ ಮರೆಯಾಗಿವ ಆಸರೆ

ಸುತ್ತ ನಗುವಿರಲು
ತನಗೆ ಬೆಳಕೆಂದು ಭಾವಿಸಿ
ಜಗದ ನಗುವಿಗೆ ಶ್ರಮಿಸುವ ಭಾವ

ಎಂ.ವಿ ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author