Poem

ಸನ್ನಡತೆಯೆಡೆಗೆ... 

ಸಂಸ್ಕಾರವೆಂಬೊಂದು
ಸುವಿಶಾಲ ವೃಕ್ಷ ವದು
ಬಾಡುತಿದೆ ಗೆದ್ದಲಿನ
ಕೊರೆತದಿಂದ
ಸನ್ನಡತೆ ಎಲೆಗಳೊಂದೊಂದಾಗಿ
ಉದುರುತಿವೆ
ಸತ್ವದಾರೈಕೆಗಳ ಕೊರತೆಯಿಂದ..

ಆದರದ ಆಥಿತ್ಯ
ಸನ್ನಡತೆಕಲಿಕೆಯಲಿ
ಪ್ರೀತಿ ಬಾಂಧವ್ಯದಲಿ
ಕೃತ್ರಿಮತೆ ನೆರಳು
ಸಜ್ಜನಿಕೆಗಿದು ಒಂದು
ನುಂಗಲಾರದ ತುತ್ತು
ಗಂಟಲೊಳಗಿಳಿದಂತೆ
ಕಾದ. ಸರಳು..

ಮನಸೊಳಗೆತುಂಬಿಹುದು
ಅಸಹನೆಯ ಕರಿತಿರುಳು
ಒಳಿತು ಭಾವದನಿಲುವಿ
ಗದು ಒಂದು ಉರುಳು
ತೊಲಗಬೇಕಿದೆ ಮತಿಗೆ
ಮುತ್ತಿಕೊರೆಯುವ ಕುರುಬು
ಉರಿಯ ತಣಿಸುವ ತೆರದ
ವಿವೇಕದ್ವರವು..

ಸಾಗಬೇಕಿದೆ ನಮ್ಮ
ಸಂಸೃತಿಯ ಮುನ್ನಡೆಸೆ
ಸಂಸ್ಕಾರದಾ ಭಾರ
ಹೊತ್ತು ತೇರು.
ಸಚ್ಜರಿತ ಪಥದಲ್ಲಿ
ಸಂಯಮದ ಸ್ಥಿತಿಯಲ್ಲಿ
ಸೇರಬೇಕಿದೆ
ಭವ್ಯ ಭವಿತವ್ಯದೂರು.

-ಸೀತಾ ಹೆಗಡೆ

ಸದಾಶಿವ ದೊಡಮನಿ

ಸದಾಶಿವ ದೊಡಮನಿ ಮೂಲತಃ ಇಳಕಲ್ ನವರು. ಕಾವ್ಯ ಸಂಶೋಧನೆ, ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹನಿಗವಿತೆಗಳನ್ನು ಬರೆಯುತ್ತಿದ್ದಾರೆ. ಪ್ರಸ್ತುತ ಇಳಕಲ್ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ನೆರಳಿಗೂ ಮೈಲಿಗೆ, ಇರುವುದು ಒಂದೇ ರೊಟ್ಟಿ

More About Author