Poem

ಶೌಚಾಲಯ

ಕನಸುಗಳು ಬಿತ್ತಾರಗೊಳ್ಳುವುದೇ ಇಲ್ಲಿ ತಿಕ್ಕಲು
ತೆವಲುಗಳಿಗೆ ನೇಕಾರ ಸಾರ್ವಜನಿಕ ಶೌಚಾಲಯ.
ಅಪೀಮು, ಗಾಂಜಾ, ಸಿಗರೇಟು, ಶರಾಬು, ಗುಟ್ಕಾ...
ಶೌಚಾಲಯಗಳ ಗೋಡೆಗಳ ತುಂಬಾ ಯಾರದೋ ತೆವಲು
ಅಂಟಿದ ಅಶ್ಲೀಲ ಅಕ್ಷರಗಳು ಹಸ್ತ ಮೈಥುನ
ಸೂಳೆಗಾರಿಕೆಯ ಬೀದಿಯಂತೆ ಯಾರೋ ಬರುವರು, ಹೋಗುವರು
ಒಳಹೋಗುತ್ತಿದ್ದಂತೆಯೇ ಸ್ವಾತಂತ್ರ್ಯಯರು ತಮ್ಮ ತನದಲ್ಲೇ ಮೈಮರೆಯುವ ಒಸಗೆ.
ಕ್ವಿಂಟಲ್ ಗಟ್ಟಲೆ ಕನಸುಗಳ ಕಾಣುವವರು
ಶೌಚಾಗಾರನ ಬಾಗಿಲು ಬಡಿದ ಶಬ್ದಕ್ಕೆ ಬೆಚ್ಚಿಬೀಳುತ್ತಾರೆ
ಇವರು ಒಳಹೋಗುತ್ತಿದ್ದಂತೆ ನಮ್ಮ ತನದಲ್ಲಿ ಮೈಮರೆಯುವವರು
ಈ ತೆವಲು, ತಿಕ್ಕಲುಗಳು ಹೊರಬಂದಾಗ ಇರುವುದಿಲ್ಲ
ಹೌದು ಸಾರ್ವಜನಿಕ ಶೌಚಾಲಯವೆಂದರೆ ಹಾಗೆ ಕನಸುಗಳ ಸ್ವರ್ಗ,
ವಿಚಿತ್ರ ಮನಸುಗಳ ಚಿತ್ತಾರ ಒಳ ಒಳಗೆ ಅರಳುವ ವಿಕೃತ ಶಾಲೆ

- ಜಗದೀಶ್ ಜೋಡುಬೀಟಿ

ಜಗದೀಶ್ ಜೋಡುಬೀಟಿ

ಜಗದೀಶ್ ಜೋಡುಬೀಟಿ ಅವರು ಮೂಲತಃ ಕೊಡಗಿನವರು. ಅವರು ಕಾವ್ಯ ಪ್ರಕಾರಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ಈಗಾಗಲೇ ಹಲವು ಕವಿತೆಗಳನ್ನು ಬರೆದು, ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ.

More About Author