Poem

ಸೂರ್ಯರಿಬ್ಬರು !

ನನ್ನೂರಿಗೆ
ಆಗಸವೊಂದೇ
ಸೂರ್ಯರಿಬ್ಬರು
ಒಬ್ಬ ಕೇರಿಯ
ರಾಜಕುಮಾರ
ಇನ್ನೊಬ್ಬ ಊರಿಗೆ
ಸಾರ್ವಭೌಮ !

ಸಾರ್ವಭೌಮನ
ವರ್ಣ ಕೆಂಪು
ಕೇರಿಕುಮಾರನ
ಬಣ್ಣ ಕಪ್ಪ!

ಕಾರಣ
ಗುಡ್ಸಲಗಳ ವಲಿ
ಹೊಗಿ ಮಸಿ
ಕುಡದ ಸೊರಗಿ
ಕಪ್ಪಾದರ
ಊರ ಸೂರ್ಯ
ರಾತ್ರಿ ಕೇರಿಗ
ಬೆಕ್ಕಿನಾಂಗ ನುಗ್ಗಿ
ಚೆಂದದ ಚರ್ಮ
ಮಾಸಿದ ಮಾಂಸ
ಮೇಲೊಂದಿಷ್ಟು
ಹಾಲು ಹಸಿ

ರಕ್ತ ಕುಡದ
ಕೊಬ್ಬಿದ್ದಾನ
ಅದಕ ಅವಾಂ
ಊರ ಹಿರಿಯ
ಇವಾಂ ಅವಂನ
ಕಾಲಾಳು ಕರಿಯ !

- ಅಶ್ಫಾಕ್ ಪೀರಜಾದೆ.

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. 

ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು)  

More About Author