Poem

 ತಾಯಿ

ನೀ ಮಮತೆಯ ಮೂರುತಿ..!
ನೀ ನಿನ್ನಯ ಬಾಳಿನ ಕೀರುತಿ...!
ಬಾಳಲಿ ಈಕೆಯೇ ನಾಯಕಿ..!
ಜೀವ ರೂಪಿಸಿದ ರೂಪಕಿ...!
ಬಾಳಲಿ ಈಕೆಯೇ ಸರಸ್ವತಿ..!
ಆಕೆಯೇ ನನ್ನಯ ಸಂಸ್ಕೃತಿ..!
ವಾತ್ಸಲ್ಯ ಪಥವೇ ಮಾತ್ರವಲ್ಲ.!
ಜೀವದ ಪ್ರತಿಯೇ ಈಕೆಯೇ..!
ನವ ತಿಂಗಳು ಕಳೆದರೂ..!
ಹೇಳಲಿಲ್ಲವಲ್ಲ ಆಕೆ ಭಾರವೂ..!
ನೀ ನನ್ನ ಹೆತ್ತವಳು..!
ನೀ ನನ್ನ ಹೊತ್ತವಳು..!
ನನ್ನ ಬಾಳ ಹಿತೈಷಿ..!
ನಗುವಿನಿಂದಲೇ ಸಂತೋಷಿ..!
ಮೂರು ವರ್ಷ ಎತ್ತು ಲಾಲಿಸಿ..!
ತುಂಟಾಟ ನೀ ಸಹಿಸಿದೆ..!
ನೀ ನನ್ನ ಬೆಳೆಸಿದೆ..!
ನನ್ನ ಅಳುವಿನಲಿ ಹಾಲುಣಿಸಿದೆ..!
ನನ್ನ ನಿದ್ರೆಯಲಿ ನೀ ಜಾಗ್ರತವಾದೆ...!
ನನ್ನ ನಗುವಿಗೆ ನೀ ಸಂತುಷ್ಟಳಾದೆ..!
ನನ್ನ ಬಾಳೆಲ್ಲವು ನೀನಾದೆ.‌.!
‌ಋಣ ತೀರಿಸಲಾಗದೆ ಅಮ್ಮ..!
ಋಣಿ ಆದೆ ಅಮ್ಮ...!
ನೀ ಬರಹವಾಗದ ಶಬ್ದವಾದೆ..!
ನೀ ದನಿಯಲಿ ಅಮ್ಮನಾದೆ..!

- ಸಿಂಚನ ಜೈನ್

ಸಿಂಚನ ಚಂದ್ರಕಾತ್ ಜೈನ್

ಸಿಂಚನ ಚಂದ್ರಕಾತ್ ಜೈನ್ ಮೂಲತಃ ಹೊನ್ನಾವರದವರು. ಬರವಣಿಗೆ ಹಾಗೂ ಕವನ ರಚನೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author