Poem

ಯುಗಾದಿ

ಹೊಸ ಉಪಕ್ರಮಗಳ ನಾಂದಿಯೇ ಯುಗಾದಿ,
ಕಹಿ ಸಿಹಿಗಳೊಂದಿಗೆ ಹೊಸ ರುಚಿಯ ಆದಿಯೇ ಯುಗಾದಿ.

ಹಳೆ ಎಲೆಗಳು ಉದುರಿ, ಹೊಸ ಎಲೆಗಳು ಚಿಗುರಿ,
ಸಕಲ ಜೀವಿಗಳಿಗೆ ಸುಖ-ದುಃಖಗಳ ಪಾಠವೇ ಯುಗಾದಿ.

ಹೊಸ ಸಂವತ್ಸರದ ಆಗಮದಿ ಹೊಸ ಕನಸುಗಳ ಕಡೆಗೆ,
ಹೊರಳುವುದಲ್ಲದೇ ನನಸಾಗಿಸುವ ಭರವಸೆಯೇ ಯುಗಾದಿ.

ಮೃಷ್ಠಾನ ಭೋಜನವಿರಬಹುದು ಎದುರಿಗೆ,
ಆದರೂ ಸಮವಾಗಿ ರುಚಿಸಿ, ಮಿತವಾಗಿ ಭಕ್ಷಿಸುವ ಸಂದೇಶವೇ ಯುಗಾದಿ.

ವರ್ಷಕ್ಕೊಮ್ಮೆ ಪಂಚಾಗ ಬದಲಿಸುವುದರೊಂದಿಗೆ,
ಹಳೇ ಸಂಸ್ಕೃತಿಯನ್ನು ಅಚಲವಾಗಿರುವ ಉದ್ದೇಶವೇ ಯುಗಾದಿ.

- ಸಂಜಯ್ ರಾಜಾರಾವ್

ವಿಡಿಯೋ
ವಿಡಿಯೋ

ಸಂಜಯ್ ರಾಜಾರಾವ್

ಲೇಖಕ ಸಂಜಯ್ ರಾಜಾರಾವ್  ಅವರು ಬೆಂಗಳೂರು ನಿವಾಸಿ. ವೃತ್ತಿಯಲ್ಲಿ ಲೆಕ್ಕಿಗರು.  ಪ್ರವೃತ್ತಿಯಲ್ಲಿ ಲೇಖಕರು. ಇಪ್ಪತ್ತೆರಡು ಅಂಕಣಗಳು, ಎರಡು ಕವನಗಳು ಮತ್ತು ನೂರಕ್ಕೂ ಹೆಚ್ಚು ಚುಟುಕುಗಳನ್ನು ಬರೆದು ಪ್ರಕಟಿಸಿದ್ದಾರೆ. ಆರು ಸಂಕಲನಗಳಲ್ಲಿ ತಮ್ಮ ಕವನಗಳನ್ನು ಇತರ ಲೇಖಕರೊಂದಿಗೆ ಪ್ರಕಟಿಸಿದ್ದಾರೆ. "ಆತ್ಮ ಬಂಧನ" ಅವರ ಮೊದಲನೇ ಕಿರು ಕಾದಂಬರಿ.

More About Author