Story/Poem

ಅನಂತ ಕುಣಿಗಲ್

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

More About Author

Story/Poem

ನನ್ನ ಕವಿತೆ 

ನನ್ನ ಕವಿತೆ ಯಾರಿಗೂ ಬೇಡದ ಕವಿತೆ ಯಾರೂ ಓದದ ಕವಿತೆ ನಾನೇ ಬರೆದ ಕವಿತೆ ಇದು ನನ್ನದೇ ವ್ಯಥೆ ದೊಡ್ಡ ಡೊಡ್ಡ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳು ಕಲರ್ ಪುಲ್ ಮ್ಯಾಗಜಿನ್ ಗಳು ವೆಬ್ ಪತ್ರಿಕೆಗಳು ತಿರಸ್ಕರಿಸಿದ ಕವಿತೆ ನನ್ನ ಕವಿತೆ ಬಾಯಿಂದ ಬಾಯಿಗೆ ಹರಡದೆ ಕ್ಯಾಸೆಟ್ಟುಗಳಲ...

Read More...

ಯಾಶಿ 

ಯಾಶಿ ಎನ್ನ ಮನದನ್ನೆ ನನ್ನ ಕವಿತೆಗಳ ರಾಯಭಾರಿ ಇಂಥದ್ದೇ ಕನಸು ಬೀಳಬೇಕೆಂದು ನಿರ್ಧರಿಸುವ ಪ್ರೀತಿ ಪಂಚಾಯ್ತಿಯ ಅಧ್ಯಕ್ಷೆ ತಾಜ್ ಮಹಲ್ ಕಟ್ಟೆಂದು ಕೇಳುವುದಿಲ್ಲ ಫಿಲ್ಮ್, ಪಾರ್ಕ್, ಶಾಪಿಂಗ್ ಇಷ್ಟಪಡುವುದಿಲ್ಲ ಹೊಂಗೆಮರದ ತಂಪಿನ ಕೆಳಗೆ ನಾಲ್ಕಾಣಿ ಪೆಪ್ಪರಮೆಂಟು ಚೀಪುತ್ತಾ.. ಬಾಹ...

Read More...

ಸಾಧನ ಕೇರಿಯ ಹಾಡು

ಹಲ್ಲು ಬಿಡದೆ ನಕ್ಕಾಂವ ಮನಸ ತುಂಬಿ ಹಾಡಾಂವ ನಮ್ಮ ಕೇರಿಯ ಸರಳಜ್ಜ ಸಾಧನಕೇರಿಯ ಹಿರಿಯಜ್ಜ ಮಾತಿನಲ್ಲಿ ಮಾಯ್ಕಾರ ಕೇಳುಗರು ಕಳೆದೋಗ್ತಾರ ಸುರುಳಿ ಸುತ್ತಿದ ಸರಪಳಿ ಮಾತು ಮಾತಲ್ಲೂ ಕಚಗುಳಿ ಬಿದಿರಿನ ಹಾಗೆ ಒಣಕಲು ದೇಹ ಬಾಯಿ ಬಿಟ್ಟರೆ ಪದಗಳ ಮೋಹ ತಾಳಗಳಿಲ್ಲದೆ ಲಾಲಿ ಹಾಡ್ತಾನ...

Read More...

ಒಂದು ಕಪ್ ಟೀ.. ಮತ್ತು ಓದದಿರುವ ಕವಿತೆ 

ಘಮಘಮಿಸುತ್ತಾ.. ಚಳಿಯನ್ನು ದೂರುವಂತೆ ಹಬೆಯಾಡುತ್ತಾ.. ಕಪ್ ನಲ್ಲಿ ಬೆವರುತಿದ್ದ ಟೀ.. ಓದದಿರುವ ಪುಟ್ಟ ಕವಿತೆಯ ಪುಟವೊಂದನ್ನು ಪದೇ ಪದೇ ಕೆದಕಿ ಮಾತಿಗಿಳಿತ್ತಿತ್ತು ಕಪ್ ಅನ್ನು ಕೈಗೆತ್ತುಕೊಂಡಾಕ್ಷಣ ಕೈ ಕಂಪನ ನಿಂತು ಕವಿತೆಯನ್ನು ಓದುವ ಆಸೆಯಾಯ್ತು ಸುರ್ ಎಂದು ಹೀರಿದ ಒಂದು ...

Read More...

ತಿರುವುಗಳು 

ಪುಟ್ಟ ಪಾದಗಳ ಅಡ್ಡದಿಡ್ಡಿ ಹೆಜ್ಜೆಗಳು ನನ್ನವು ಗೋಡೆ ಹಿಡಿದು ಅಪ್ಪನ ಹಿಂದೆ ಹೆಜ್ಜೆ ಸವೆಸುತ್ತಾ ಆಗಷ್ಟೇ ತೊದಲುವುದ ಕಲಿಯುತ್ತಿದ್ದೆ ಅಪ್ಪನ ಹೆಗಲು ಪಲ್ಲಕ್ಕಿಯಾಗಿತ್ತು ತನಗೆ ಕಾಣದ್ದನ್ನೆಲ್ಲ ನನಗೆ ತೋರಿಸುತ್ತಿದ್ದ ಅಪ್ಪಾ.. ನನ್ನ ಬದುಕಿನ ಮೊದಲ ತಿರುವು ರೊಟ್ಟಿ ಸುಡುವ ವಾಸ...

Read More...