Story/Poem

ಶರಣ್ಯ ಕೋಲ್ಚಾರ್

ಕವಿ ಶರಣ್ಯ ಕೋಲ್ಚಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೋಲ್ಚಾರಿನವರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡ್ಪಿನಂಗಡಿಯಲ್ಲಿ ಪೂರೈಸಿ, ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯಲ್ಲಿ ಪ್ರೌಡ ಶಿಕ್ಷಣ ಪೂರೈಸಿದ ಇವರು ಕಲಾವಿಭಾಗದಲ್ಲಿ ಪದವಿ ಪಡೆದು ನಂತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಚಾರ ವಿಮರ್ಶೆ, ಭಾಷಣ, ಬರವಣಿಗೆ, ಪ್ರವಾಸ, ಓದು ಇವರ ನೆಚ್ಚಿನ ಹವ್ಯಾಸಗಳು

More About Author

Story/Poem

ನನ್ನ ದಿನ

ನನ್ನ ದಿನವೆಂದು ಸಂಭ್ರಮಿಸಿದರೆ ತಾಯಿ ನೋವ ಮರೆವಳೇ ಅಸಾಧ್ಯ ನೋವಲ್ಲಿಯೂ ಬಸಿರ ಸೀಳಿ ಹೊರಬಂದಾಗ ನನ್ನ ಕಣ್ಣುಗಳಿಗಾವರಿಸಿದ ನೆತ್ತರು ಮಿಶ್ರಿತ ಪೊರೆಯಲ್ಲಿ ಆ ಮೊಗದ ಪ್ರಸನ್ನತೆಯ ನೋಡಿದಾಗ ಹೊಳೆಯಿತಲ್ಲ ಪಿತನ ಸಡಗರಕ್ಕೆ ಎಲ್ಲೆಯೆಲ್ಲಿ ಹೆಣ್ಣೆಂದು ಹೀಗಳೆದರಲ್ಲಿ ಪ್ರೀತಿ ಹಂದರದೊಳಗ...

Read More...

ನೆನಪು ತರುವ ಹೂ ಮಳೆ

ಧೋ ಎಂದು ಸುರಿಯುವ ಸೋನೆ ಮಳೆ ಬೇಡ ಬೇಡವೆಂದರೂ ನಿನ್ನ ನೆನಪುಗಳ ಸಿಹಿ ಮೂಟೆಯ ಹೊತ್ತು ತರುತಿದೆ.... ಮಳೆಯೊಳಗೆ ಲಾಸ್ಯವಾಡುವ ಗಾಳಿ ಸುಯ್ಯನೆ ಬೀಸಿ ಹೂ ಹನಿಗಳ ಮುಖಕ್ಕೆ ರಾಚುತ್ತಿದೆ ಮನದ ನೂರು ನೆನಪುಗಳು ಮುದಗೊಂಡಿದೆ... ಇಳಿ ಸಂಜೆಯ ಈ ಮಳೆಯೇಕೆ ಇಷ್ಟು ಸುಂದರ ಇನಿಯನ ನೆನಪ...

Read More...

ಇರುಳಿನ ಜಾರಿಣಿ

ಸೋರುವ ಮುರುಕಲು ಸೂರಿನೊಳಗೆ ಕಾಲಿನ ಬಲಕಳೆದುಕೊಂಡ ಹೆತ್ತಮ್ಮ ಮೂರು ಹೊತ್ತು ಕುಡಿದು ತೂರಾಡುವ ಅಪ್ಪ ಮೈ ಕೈ ತುಂಬಿ ಚಿಗರೆಯಂತೆ ಬೆಳೆಯುತ್ತಿರುವ ನನ್ನ ಮೇಲೆಯೇ ಊರು ಹೈಕಳ ಕೆಟ್ಟ ಕಣ್ಣು ಸೋದರಮಾವನಿಗಿತ್ತು ತೀರಾ ಹಣದ ಹುಚ್ಚು ಸೋತ ಸಂಸಾರದಲ್ಲಿ ನನ್ನ ಕಂಡರೆ ಹೊಟ್ಟೆಕಿಚ್...

Read More...

ಪ್ರೀತಿಯ ದೀಪ

ಬದುಕ ಬೆಳಗಲು ಬೇಕು ಪ್ರೀತಿಯೆಂಬ ದೀಪ ಮನಮನೆಗಳ ಬೆಳಗುವುದು ಬೆಳಕಿನ ದೀಪ ಭೇದವ ಮರೆತು ಹಚ್ಚೋಣ ಒಗ್ಗಟ್ಟಿನ ದೀಪ ಬಸವಳಿದ ಬದುಕಿಗೆ ಬೇಕು ಆರದಿರೋ ದೀಪ ಮೂರು ದಿನದ ಬದುಕಲಿ ಕರಗದಿರಲಿ ಶಾಂತಿ ನಿತ್ಯ ಓಡುತ್ತಲೇ ಇರು ಬದಲಾವಣೆಯೇ ಕ್ರಾಂತಿ ಕೊಲೆ ಸುಲಿಗೆಗಳಿಂದಲೇ ಜನರಿಗಿಹುದು ಭೀತಿ ...

Read More...

ಕನಸಿನ ಕೃಷ್ಣ

ತಡೆ ರಾಧೆ....ಈಗ ಬರುವೆನೆಂದ ಕೃಷ್ಣ.... ಹೇಳದೆಲ್ಲಿ ಮಾಯವಾದನೋ ನಾ ಕಾಣೆ... ಹೊತ್ತು ಮೀರಿ ಹಾದಿಯತ್ತ ಬೆಳಕುಅರೆ ಮಾಸುತ್ತಿದೆ‌ ನಾನು ತೆರಳಲೇ ... ಮೆಲ್ಲನೆ ಕಲ್ಲು ಬಂಡೆಯ ಮೇಲೆ ಕುಳ್ಳಿರಿಸಿ....ರಾಧೆ ಎನ್ನುತ ಓಡಿರುವ ನನ್ನಿನಿಯ ಯಶೋದೆ ಕಂದ ನನ್ನ ಬಳಗ ಗೋಪಿಕೆಯರನಟ್ಟಿ ಮ...

Read More...