Poem

ನನ್ನ ದಿನ

ನನ್ನ ದಿನವೆಂದು ಸಂಭ್ರಮಿಸಿದರೆ
ತಾಯಿ ನೋವ ಮರೆವಳೇ
ಅಸಾಧ್ಯ ನೋವಲ್ಲಿಯೂ
ಬಸಿರ ಸೀಳಿ ಹೊರಬಂದಾಗ
ನನ್ನ ಕಣ್ಣುಗಳಿಗಾವರಿಸಿದ
ನೆತ್ತರು ಮಿಶ್ರಿತ ಪೊರೆಯಲ್ಲಿ
ಆ ಮೊಗದ ಪ್ರಸನ್ನತೆಯ
ನೋಡಿದಾಗ ಹೊಳೆಯಿತಲ್ಲ
ಪಿತನ ಸಡಗರಕ್ಕೆ ಎಲ್ಲೆಯೆಲ್ಲಿ
ಹೆಣ್ಣೆಂದು ಹೀಗಳೆದರಲ್ಲಿ
ಪ್ರೀತಿ ಹಂದರದೊಳಗೆ ಬೆಳೆದು
ಎರಡು ದಶಕಗಳ ದಾಟಿ
ಬಹುಮುಂದೆ ಬಂದಿರುವೆ
ನೂರಾರು ಪ್ರೀತಿ ಸ್ನೇಹವ
ಅಕ್ಕರೆಯಿಂದ ಗಳಿಸಿರುವೆ
ಮಾತೆಯ ನಗುವಲ್ಲಿ ಜಗದ
ಸುಖದುಃಖ ನೋಡುತ್ತಿರುವೆ
ನನ್ನ ದಿನವೆಂದು ಸಂಭ್ರಮಿಸುತ್ತಿರುವೆ

- ಶರಣ್ಯ ಕೋಲ್ಚಾರ್

ವಿಡಿಯೋ
ವಿಡಿಯೋ

ಶರಣ್ಯ ಕೋಲ್ಚಾರ್

ಕವಿ ಶರಣ್ಯ ಕೋಲ್ಚಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೋಲ್ಚಾರಿನವರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡ್ಪಿನಂಗಡಿಯಲ್ಲಿ ಪೂರೈಸಿ, ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯಲ್ಲಿ ಪ್ರೌಡ ಶಿಕ್ಷಣ ಪೂರೈಸಿದ ಇವರು ಕಲಾವಿಭಾಗದಲ್ಲಿ ಪದವಿ ಪಡೆದು ನಂತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಚಾರ ವಿಮರ್ಶೆ, ಭಾಷಣ, ಬರವಣಿಗೆ, ಪ್ರವಾಸ, ಓದು ಇವರ ನೆಚ್ಚಿನ ಹವ್ಯಾಸಗಳು

ಪ್ರಸ್ತುತ ಹೊಸದಿಗಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More About Author