Poem

ಪ್ರೀತಿಯ ದೀಪ

ಬದುಕ ಬೆಳಗಲು ಬೇಕು ಪ್ರೀತಿಯೆಂಬ ದೀಪ
ಮನಮನೆಗಳ ಬೆಳಗುವುದು ಬೆಳಕಿನ ದೀಪ
ಭೇದವ ಮರೆತು ಹಚ್ಚೋಣ ಒಗ್ಗಟ್ಟಿನ ದೀಪ
ಬಸವಳಿದ ಬದುಕಿಗೆ ಬೇಕು ಆರದಿರೋ ದೀಪ

ಮೂರು ದಿನದ ಬದುಕಲಿ ಕರಗದಿರಲಿ ಶಾಂತಿ
ನಿತ್ಯ ಓಡುತ್ತಲೇ ಇರು ಬದಲಾವಣೆಯೇ ಕ್ರಾಂತಿ
ಕೊಲೆ ಸುಲಿಗೆಗಳಿಂದಲೇ ಜನರಿಗಿಹುದು ಭೀತಿ
ಬಹುಉತ್ಸಾಹ, ಸಂತೋಷಗಳಿಗಿರುವುದೇ ಮಿತಿ

ನವಜೀವನದ ಪ್ರಾರಂಭ ಹೊನ್ನಬೆಳಕಿನಿಂದಾಗಲಿ
ನೋವು ನಲಿವುಗಳ ಪ್ರೀತಿ ಹಂಚಿಕೊಂಡೇ ಸಾಗಲಿ
ಏಳುಬೀಳುಗಳ ದಾಟಿ ಕಷ್ಟಗಳು ದೂರವಾಗಲಿ
ನಿತ್ಯನಗುವಿನ ದೀಪಾವಳಿ ಬೆಳಕು ಬೆಳಗುತ್ತಿರಲಿ

ಸಂಸ್ಕೃತಿಯ ದೀಪಾವಳಿ ಬದುಕಿನ ಚಿತ್ತಾರವಾಗಲಿ
ಪ್ರತಿ ಜೀವಿಯ ಬದುಕು ಬೆಳಕಿನಿಂದಲೇ ಕಂಗೊಳಿಸಲಿ

ಶರಣ್ಯ ಕೋಲ್ಚಾರ್

ಶರಣ್ಯ ಕೋಲ್ಚಾರ್

ಕವಿ ಶರಣ್ಯ ಕೋಲ್ಚಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕೋಲ್ಚಾರಿನವರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡ್ಪಿನಂಗಡಿಯಲ್ಲಿ ಪೂರೈಸಿ, ಬಾಳಿಲ ವಿದ್ಯಾಭೋಧಿನಿ ಪ್ರೌಢಶಾಲೆಯಲ್ಲಿ ಪ್ರೌಡ ಶಿಕ್ಷಣ ಪೂರೈಸಿದ ಇವರು ಕಲಾವಿಭಾಗದಲ್ಲಿ ಪದವಿ ಪಡೆದು ನಂತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಚಾರ ವಿಮರ್ಶೆ, ಭಾಷಣ, ಬರವಣಿಗೆ, ಪ್ರವಾಸ, ಓದು ಇವರ ನೆಚ್ಚಿನ ಹವ್ಯಾಸಗಳು

ಪ್ರಸ್ತುತ ಹೊಸದಿಗಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More About Author