Article

ಕೇರಳ ಕಥೆಗಾರ್ತಿಯರ ದಾರುಣ ಕಥೆಗಳು

'ಕೇರಳ ಕಾಂತಾಸಮ್ಮಿತ' ಹೇಳುವ ಕೇರಳ ಕಾಂತೆಯರ ದಾರುಣ ಕಥೆ ಇದು. ಪ್ರಸಿದ್ಧ ಸಾಹಿತಿ ಕಮಲಾ ಹೆಮ್ಮಿಗೆ ಅವರು ಮಲೆಯಾಳಂ ಭಾಷೆಯಿಂದ ಕನ್ನಡಕ್ಕೆ ತಂದ ಅಪೂರ್ವ ಕಥೆಗಳಿವು. ವಿವಿಧ ತಲೆಮಾರಿಗೆ ಸಂಬಂಧಸಿದ 30 ಕಥೆಗಾರ್ತಿಯರು ಇದ್ದಾರೆ.

ಅಧಿಕ ಸಾಕ್ಷರತೆ ಇರುವ ಹೆಣ್ಣು ಮಕ್ಕಳಿಗೂ ಕಷ್ಟ ಎಂಬುದನ್ನು ಇಲ್ಲಿ ಮನಗಾಣಬಹುದು. ಬ್ರಾಹ್ಮಣ ಮಹಿಳೆಯರ ದುಸ್ಥಿತಿಯೂ ಹೇಳತೀರದ್ದಾಗಿದ್ದು, ಅವರು ಮೊರ ಹಾಗೂ ಕೊಡೆಯಿಂದ ಮುಖ ಮರೆಸಿಕೊಳ್ಳುವ ಸನ್ನಿವೇಶ ಇಲ್ಲಿದೆ. ರವಿಕೆ ಧರಿಸಲೂ ಹೋರಾಡಬೇಕಿದ್ದ ದುಸ್ಥಿತಿ ಹೇಳುವ ಕಥೆ ಮನಸ್ಸನ್ನು ಅಘಾತಗೊಳಿಸುತ್ತದೆ.

ಒಂದು ವಯಸ್ಸಿನಲ್ಲಿ ತಂದೆ ತಲೆ ಹಿಡಿಯುತ್ತಿದ್ದರೆ, ವಯಸ್ಸು ಮೀರಿದ ನಂತರ ಮಗ ತಲೆ ಹಿಡಿಯುವದು ದಾರುಣವಲ್ಲದೇ ಮತ್ತೇನು?!

9ನೇ ಮಗ್ಗಿ ಹೇಳಲು ಬಾರದ ಮಗುವೊಂದು ತಂದೆಯಿಂದ ಬೇರೆಯಾದ ಮೇಲೆ ತಾಯಿ ಜತೆಗೆ ಬದುಕಿನ ಕನಸು ಕಾಣುವ ಪರಿ ಅನನ್ಯ. ಕಮಲಾದಾಸರು ಕಾಮ ಕೇಂದ್ರಿತವಾಗಿ ಬರೆದರೆ ಉಳಿದವರು ಪುರಾಣ ಭಂಜಕರಾಗಿ ಕಾಣುತ್ತಾರೆ. ಈ ದಿಟ್ಟ ಸಂವೇದನೆಗಳು ಕನ್ನಡ ಮಹಿಳಾ ಲೋಕಕ್ಕೆ ಅತ್ಯವಶ್ಯವಾಗಿದ್ದವು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

ಶಿವು ಕೆ. ಲಕ್ಕಣ್ಣವರ