Book Watchers

ಚಂದ್ರಪ್ರಭಾ

ಚಂದ್ರಪ್ರಭಾ ಅವರು ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಎರಡು ಸಾಹಿತ್ಯ ಓದಿನಲ್ಲೂ ಸಾಮ್ಯತೆ ಸಾಧಿಸಿರುವ ಅವರು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವನ, ಚುಟುಕು ಬರವಣಿಗೆ ಇಷ್ಟದ ಹವ್ಯಾಸ. ಅವರ ಹಲವಾರು ಲೇಖನಗಳು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಮ್ಮ ಬಿಡುವಿನ ವೇಳೆಯನ್ನು ಸಾಹಿತ್ಯ ಓದಿಗಾಗಿ ಮೀಸಲಿಟ್ಟಿದ್ದಾರೆ.

Articles

ಕಸ್ತೂರ್ ಬಾ ಜೀವನ ಕಥನ- ಒಂದು ಒಳನೋಟ

ಸರಳ ಜೀವನದ ಸೂತ್ರಗಳಿಗೆ ಒಗ್ಗಿಕೊಳ್ಳುತ್ತಲೇ ತಾನು ಹೋರಾಟದ ದಾರಿ ತುಳಿಯುವ ಕಸ್ತೂರ್ ಭಾಯಿಯ ಸತ್ಯ ಶೋಧನೆಯ ದಾರಿಯಲ್ಲಿ ತನ್ನ ಆಂತರಿಕ ಹೊಯ್ದಾಟವನ್ನೂ ನಿರೂಪಿಸುತ್ತಾರೆ. ರೂಪಾಂತರಗೊಂಡ ತನಗೆ ಚರಕಾ ಎಂಬ ನಿತ್ಯ ಸಂಗಾತಿ ದೊರೆತ ಮೇಲೆ ಬದುಕಿನ ಗತಿಯೇ ಬದಲಾದುದನ್ನು ಬಣ್ಣಿಸುತ್ತಾರೆ.

Read More...

ಸೊನಾಟಾ, ಧರ್ಮಪುತ್ರ, ವಾಸಾಂಸಿ ಜೀರ್ಣಾನಿ - ಎಲಕುಂಚವಾರರ ಮೂರು ನಾಟಕಗಳು

’ತಮ್ಮ ವಿಶಿಷ್ಟ ಶೈಲಿ,  ನಿರೂಪಣೆಯ ಮೂಲಕ ಸಾಮಾನ್ಯ ಮನುಷ್ಯನಲ್ಲಿ ಹುದುಗಿದ ಆತಂಕ-ಕ್ರೌರ್ಯ, ಆತ್ಮ ಭೀತಿ, ದುಸುಮುಸಿಗಳ ಆಂತರಿಕ ಜಗತ್ತನ್ನು ತೆರೆದಿಡುವ ಎಲಕುಂಚವಾರರ ನಾಟಕಗಳು ವಾಸ್ತವವಾದದ ಮಿತಿಯನ್ನು ದಾಟುತ್ತವೆ' ಎಂಬ ಮಾತು ಅಕ್ಷರಶಃ ಸತ್ಯ...

Read More...

’ಅವ್ವ ಮತ್ತು ಅಬ್ಬಲಿಗೆ’ಯಲ್ಲಿ ಬಂಡಾಯದ ದನಿ

ಕವಯಿತ್ರಿ "ಅವಳು ಮುಟ್ಟಿನ ಬಟ್ಟೆಯಂತವಳು.. ಹೊರ ಜಗುಲಿಗೆ ನಿಷಿದ್ಧವಾದೊಂದು ಕೈಚೌಕದ ಚಿಂದಿ" ಎನ್ನುತ್ತಾಳೆ. ಬಾಲಕ ಅಯ್ಯಪ್ಪನನ್ನು "ಹುಲಿ ಹಾಲನುಂಡವನೆ ನೋಡು ಬಾ ತಾಯ ಹಾಲ ರುಚಿ.. " ಎಂದು ಆಹ್ವಾನಿಸುತ್ತಲೇ "ಥೇಟ್ ನನ್ನ ಮಗನಂತೆ ಎತ್ತಿಕೊಂಡು ಮುತ್ತಿಡುವೆ.. ಈಗ ಹೇಳು, ನನ್ನ ಮುಟ್ಟು ನಿನಗೆ ಮೈಲಿಗೆಯೆ? " ಎಂದು ಪ್ರಶ್ನಿಸುವ ಕವಿ ಮೂಲಭೂತವಾದಿಗಳಿಗೆ ತಣ್ಣಗೆ ಸವಾಲೆಸೆಯುತ್ತಾರೆ.

Read More...

ಜೀವಸತ್ಯದ ಬೆಳಕಿನ ಕಿರಣಗಳು 'ಫೆಮಿನಿಸ್ಟ್ ಮ್ಯಾನಿಫೆಸ್ಟೊ'

ತನಗೆ ಬೇಡದಿರುವುದನ್ನು ಬೇಡ ಎನ್ನುವುದು ಆಕೆಗೆ ಹೆಮ್ಮೆಯ ಸಂಗತಿಯಾಗಿರಲಿ. ಋತುಚಕ್ರ ಅಸಹ್ಯವಾದರೆ ಅದೊಂದು ಪವಿತ್ರವಾದ ಅಸಹ್ಯ.. ಅದಿಲ್ಲದಿದ್ದರೆ ಮನುಕುಲವೇ ಇರುತ್ತಿರಲಿಲ್ಲ.

Read More...