About the Author

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ.
ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ), ಶೇಕ್ಸ್ ಪಿಯರ್ ಮನೆಗೆ ಬಂದ (ನಾಟಕ),ಶಾಂತವೇರಿ ಗೋಪಾಲಗೌಡ(ಜೀವನಚರಿತ್ರೆ), ಕಾಮನ ಹುಣ್ಣಿಮೆ (ಕಾದಂಬರಿ), ಕನ್ನಡಿ (ಪ್ರಜಾವಾಣಿ ಅಂಕಣ ಬರಹಗಳು). 
ಹಸಿರು ಸೇನಾನಿ, ತೆರೆದ ಪಠ್ಯ, ಶೇಕ್ಸ್ಪಿಯರ್: ಕನ್ನಡ ಸ್ಪಂದನ; ಆಫ್ರಿಕಾ ಸಾಹಿತ್ಯ ವಾಚಿಕೆ, ಲೋಹಿಯಾ ಚಿಂತನೆ (ಸಂಪಾದಿತ ಕೃತಿಗಳು)
ಸ್ವಾತಂತ್ರ್ಯದ ಅಂತರ್ಜಲ, ಉತ್ತರ ದಕ್ಷಿಣ, ಭಾಷೆ ಮತ್ತು ಇತಿಹಾಸ, ಕಣ್ಣೆದುರಿನ ಪ್ರಶ್ನೆಗಳು, ಮಾನವಕುಲದ ಏಕತೆ; ಮಾರ್ಕ್ಸ್, ಗಾಂಧಿ, ಸಮಾಜವಾದ; ಕಣ್ಣೆದುರಿನ ಪ್ರಶ್ನೆಗಳು (ಲೋಹಿಯಾ ಕನ್ನಡಾನುವಾದಗಳ ಸಂಪಾದಿತ ಕೃತಿಗಳು), ಲೋಕ ಸಾಹಿತ್ಯ ಮಾಲಿಕೆಯ 11 ಕೃತಿಗಳು; ಭಾರತೀಯ ಭಾಷಾ ನಾಟಕ ಮಾಲಿಕೆಯ 15 ಕೃತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿ (2017), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು (1994, 2002, 2009) ಮಾಧ್ಯಮ ಅಕಾಡೆಮಿಯ ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ; ಲೋಕನಾಯಕ ಜಯಪ್ರಕಾಶನಾರಾಯಣ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ-1986 ಮೊದಲ ಬಹುಮಾನ, 1990-2000 ದಶಕದ ಶ್ರೇಷ್ಟ ಕನ್ನಡ ಕತೆಯಂದು 'ಮಾಯಾಕಿನ್ನರಿ'ಗೆ ದೆಹಲಿಯ ಕಥಾ ಪ್ರಶಸ್ತಿ, 'ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು' ಕತೆಗೆ 'ಮಯೂರ' ಮಾಸಿಕದ 'ವರ್ಷದ ಕತೆ-2010' ಪ್ರಶಸ್ತಿಗಳು ಸಂದಿವೆ.

ನಟರಾಜ ಹುಳಿಯಾರ್

Awards

BY THE AUTHOR