ಕವಿಜೋಡಿಯ ಆತ್ಮಗೀತ

Author : ನಟರಾಜ ಹುಳಿಯಾರ್

Pages 130

₹ 120.00




Year of Publication: 2021
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ವಾವಾ ಎಮ್ಮಿಗನೂರ್, ಬಳ್ಳಾರಿ- 583113 
Phone: 8880087235

Synopsys

‘ಕವಿಜೋಡಿಯ ಆತ್ಮಗೀತ’ ನಟರಾಜ್ ಹುಳಿಯಾರ್ ಅವರು ರಚಿಸಿರುವ ಕಥಾಕಾವ್ಯ. ಇಪ್ಪತ್ತನೇ ಶತಮಾನದ ಇಂಗ್ಲೆಂಡಿನ ತರುಣ ಕವಿ ಟೆಡ್ ಹ್ಯೂಸ್‍ಗೆ ಒಂದು ಸಂಜೆಯ ಪಾರ್ಟಿಯಲ್ಲಿ ಅಮೆರಿಕದ ಉದಯೋನ್ಮುಖ ಕವಯಿತ್ರಿ ಸಿಲ್ವಿಯಾ ಪ್ಲಾತ್ ಸಿಕ್ಕಳು. ಅವರಿಬ್ಬರ ನಡುವಣ ಆರಂಭದ ಆಕರ್ಷಣೆ ತೀವ್ರ ಮೋಹವಾಗಿ, ಪ್ರೇಮವಾಗಿ ಬೆಳೆಯಿತು; ಸಿಲ್ವಿಯಾ-ಟೆಡ್ 1956ರಲ್ಲಿ ಮದುವೆಯಾದರು. ಇಬ್ಬರೂ ಅತ್ಯಂತ ಪ್ರತಿಭಾಶಾಲಿ ಇಂಗ್ಲಿಷ್ ಕವಿಗಳಾಗಿ ಅರಳತೊಡಗಿದರು. ಕಾವ್ಯವೇ ಬದುಕೆಂಬಂತೆ ಕಂಡಿದ್ದ ಅವರು ಕವಿತೆ, ಕತೆ, ನಾಟಕ, ವಿಮರ್ಶೆ...ಹೀಗೆ ಹಲವು ಪ್ರಕಾರಗಳಲ್ಲಿ ಬರೆದರು. ಬರಬರುತ್ತಾ ಅವರ ಬದುಕಿನಲ್ಲಿ ಏರುಪೇರುಗಳಾದವು. ಟೆಡ್ ಹ್ಯೂಸ್‍ನಿಂದ ಬೇರೆಯಾದ ಸಿಲ್ವಿಯಾ ಕಾವ್ಯನಾಮದಲ್ಲಿ ತನ್ನ ‘ಬೆಲ್ ಜಾರ್’ ಕಾದಂಬರಿ ಪ್ರಕಟಿಸಿದ ನಂತರ, ಒಂದು ರಾತ್ರಿ ತನ್ನೆರಡು ಪುಟ್ಟ ಮಕ್ಕಳನ್ನು ಬಿಟ್ಟು ತನ್ನ ಬದುಕನ್ನು ಕೊನೆಗಾಣಿಸಿಕೊಂಡಳು...ಜೊತೆಗಿದ್ದಾಗಲೂ, ಬೇರೆಯಾದಾಗಲೂ, ತೀರಿಕೊಂಡ ಮೇಲೂ ಕವಿ ಜೋಡಿಯಾಗಿಯೇ ಉಳಿದ ಈ ಇಬ್ಬರ ಬದುಕಿನ ವಿವರಗಳನ್ನು ಜೀವನ ಚರಿತ್ರೆಗಳು, ಡೈರಿಗಳು, ಜರ್ನಲ್‍ಗಳು, ಪತ್ರಗಳು ಮುಂತಾದ ಬರಹಗಳಿಂದ ಆರಿಸಿಕೊಂಡಿದ್ದೇನೆ ಎನ್ನುತ್ತಾರೆ ಲೇಖಕ ನಟರಾಜ್ ಹುಳಿಯಾರ್. ಜೊತೆಗೆ ಈ ಕೃತಿಯ ಭಾಗಗಳಿಗೆ ತಕ್ಕ ಆರಂಭಿಕ ವಾಕ್ಯಗಳನ್ನು ಈ ಇಬ್ಬರ ಕವಿತೆಗಳಿಂದಲೂ, ಇತರ ಕವಿ, ಚಿಂತಕರಿಂದಲೂ ಆರಿಸಿಕೊಂಡಿದ್ದೇನೆ. ಟೆಡ್ ಹ್ಯೂಸ್ ತನ್ನ ಕೊನೆಯ ಘಟ್ಟದಲ್ಲಿ ಮುಗಿಸಿದ ‘ಬರ್ತ್‍ಡೇ ಲೆಟರ್ಸ್’ ಕವನ ಸಂಕಲನವನ್ನು ಸಿಲ್ವಿಯಾ ಸುತ್ತ ರೂಪಿಸಿದ್ದರಿಂದ ಅಲ್ಲಿನ ಕವಿತೆಗಳ ಸಾಲುಗಳನ್ನು ಅಲ್ಲಲ್ಲಿ ಅಧಿಕೃತ ವಿವರಗಳಂತೆ ಬಳಸಿದ್ದೇನೆ. ಈ ಸಂದರ್ಭಗಳ ಆಚೆಗೂ ಈ ಪದ್ಯಭಾಗಗಳ ವ್ಯಾಪಕಾರ್ಥ ಬಹಳಷ್ಟಿದೆ ಎಂಬುದನ್ನು ಒತ್ತಿ ಹೇಳುತ್ತಿದ್ದೇನೆ ಎಂಬ ಸ್ಪಷ್ಟನೆಯನ್ನೂ ತಮ್ಮ ಅರಿಕೆಯಲ್ಲಿ ನೀಡಿದ್ದಾರೆ.

ಕೃತಿಯಲ್ಲಿ ಕವಿಜೋಡಿಯ ರಂಗಪ್ರವೇಶ, ಕಡಲಿನ ಹುಡುಗಿ; ಕಾಡುಮೇಡಿನ ಹುಡುಗ, ‘ಅಮ್ಮಾ! ಸಾಯೋಣ ಬಾ!’, ಅವನ ಕೆನ್ನೆಯ ಮೇಲೆ ಅವಳ ಹಲ್ಲು ಗುರುತಿನ ಹಚ್ಚೆ!, ಕಾವ್ಯದೇವಿಯು ನಿಂತು ಹೇಳಿ ಮಾಡಿಸಿದ ಕವಿಜೋಡಿ.., ಊರಿಂದ ಊರಿಗೆ; ನಗರದಿಂದ ಹಳ್ಳಿಗೆ, ದೆವ್ವಗಳ ಹಾಗೆ ತೆಕ್ಕೆ ಬಿದ್ದು ಕಾಮಿಸಿದ ಕಾಲ, ಕವಿಯೆಂದರೇನು? ಕವಿತೆಯೆಂದರೇನು?, ಇದು ನನ್ನರಿವಿಗೆ ಬರದ ಯಾವುದೋ ರಾಗ…, ‘ನಾನು ಜೇನುಸಾಕಣೆಕಾರನ ಮಗಳು...’, ಕವಿಜೋಡಿಯ ಇಜ್ಜಾಡು, ಎಲ್ಲ ಕಿತ್ತೊಗೆದರೂ ಬಿಡದು ಮನೆಹಾಳು ನೆನಪು.., ಹೊಸ ತೋಳಬಂದಿಯ ಅರಸಿ…, ಕವಿತೆಯೂ ಕೈ ಹಿಡಿಯಲಿಲ್ಲ, ‘ನನ್ನ ಕರೆ ಬಂದಿದೆಯೆಂದು ನೀವೀಗ ಅನ್ನಬಹುದು’, ಏನಾಯಿತು ಕವಿಗಳೆ ಏನಾಯಿತು?, ಹತ್ತು ವರುಷವು ಉರುಳಿ…, ಈಡನ್ ತೋಟದ ಎದುರು ಎಂಬ ಹೆಸರಿನ ಕಥಾಕಾವ್ಯಗಳು ಸಂಕಲನಗೊಂಡಿವೆ.

 

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Related Books