ಲೋಹಿಯಾ ಕಂಡ ಗಾಂಧೀಜಿ

Author : ನಟರಾಜ ಹುಳಿಯಾರ್

Pages 130

₹ 100.00

Buy Now


Year of Publication: 2020
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ವಿವಾ ಎಮ್ಮಿಗನೂರ್, ಬಳ್ಳಾರಿ- 583113
Phone: 8880087235

Synopsys

‘ಲೋಹಿಯಾ ಕಂಡ ಗಾಂಧೀಜಿ’ ಪಲ್ಲವ ಪ್ರಕಾಶನದ ರಾಮಮನೋಹರ ಲೋಹಿಯಾ ಚಿಂತನ ಮಾಲಿಕೆ-2ರಲ್ಲಿ ಪ್ರಕಟವಾದ ಕೃತಿ. ಹಿರಿಯ ಚಿಂತಕ, ಲೇಖಕ ನಟರಾಜ್ ಹುಳಿಯಾರ್ ಅವರು ಸಂಪಾದಿಸಿದ್ದಾರೆ.

ಇಂಡಿಯಾದ ಅನನ್ಯ ಸಮಾಜವಾದಿ ಚಿಂತಕರೂ, ಕ್ರಿಯಾಶೀಲ ರಾಜಕಾರಣಿಯೂ ಆಗಿದ್ದ ಡಾ. ರಾಮಮನೋಹರ ಲೋಹಿಯಾರ ಚಿಂತನೆಗಳನ್ನು ಪ್ರಕಾಶನವು ಗಾಂಧೀಜಿಯ 150ನೇ ಜಯಂತಿ ಅಂಗವಾಗಿ ಈ ಕೃತಿ ಪ್ರಕಟಿಸಿದೆ. ಲೇಖಕರಾದ ಬಿ.ಎ. ಸನದಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಸತ್ಯವ್ರತ, ಹಸನ್ ನಯೀಂ ಸುರಕೋಡ, ಸಿ. ನಾಗಣ್ಣ, ರವೀಂದ್ರ ರೇಶ್ಮೆ ಮೊದಲಾದವರು ಅನುವಾದಿಸಿರುವ ಲೋಹಿಯಾ ಬರಹಗಳನ್ನು ಒಟ್ಟುಗೂಡಿಸಿ, ಕೆಲವು ಬರಹಗಳನ್ನು ಅನುವಾದಿಸಿ ಸಂಪಾದಿಸಲಾಗಿದೆ. 

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Related Books