About the Author

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.  

ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ವಿಜಾಪುರ ಜಿಲ್ಲೆಯ ಮಕ್ಕಳ ಸಾಹಿತ್ಯ  ( ಕ.ವಿ.ವಿ ಪ್ರಸಾರಾಂಗದ ಉಪನ್ಯಾಸ ಮಾಲೆಯಡಿ ಪ್ರಕಟಿತ ಲೇಖನ), ಡಾ.ಚನ್ನಪ್ಪ ಕಟ್ಟಿ : ಬದುಕು ಬರಹ, ಓದಿನ ಬೆರಗು (ವಿಮರ್ಶೆ ಲೇಖನಗಳ ಸಂಕಲನ),  ಗೀಗೀ ಗಾರುಡಿಗ ಕಡಣಿ ಕಲ್ಲಪ್ಪ (ಜೀವನ ಚಿತ್ರಣ) ಅಲೆಮಾರಿ ಅವಧೂತ ( ಕಾದಂಬರಿ ಕಾರ ಸಿದ್ಧರಾಮ ಉಪ್ಪಿನ ಅವರ ಬದುಕು-ಬರೆಹ) ರಂಗಪರಿ ಚಾರಕ ಗಂಗಾಧರಪ್ಪ ಉಪ್ಪಿನ (ಜೀವನ ಚಿತ್ರಣ), ಕತ್ತಿಯ ಅಲಗು (ವಿಮರ್ಶಾ ಲೇಖನಗಳ ಸಂಕಲನ) ಮಮತೆಯ ಮೊಗ್ಗು (ಶಾಲಾ ವಾರ್ಷಿಕ ಸಂಚಿಕೆಯ ಪ್ರಧಾನ ಸಂಪಾದಕರು) , ಸತ್ಯವಾನ್ ಸಾವಿತ್ರಿ ( ಶಿವಣ್ಣ ಬ. ಕತ್ತಿ ಅವರ ಅಪ್ರಕಟಿತ ನಾಟಕ ಮತ್ತು ಕವನಗಳ ಪ್ರಕಟಣೆ) , ಕಡಣಿ ಕಾವ್ಯಧಾರೆ ಮತ್ತು  ಎಳಮೇಲಿ-30. (ವಿವಿಧ ಕವಿಗಳ ಕವಿತೆಗಳ ಸಂಕಲನಗಳು).

ರಮೇಶ ಎಸ್.ಕತ್ತಿ

(28 Aug 1978)