ಕಲ್ಲಪ್ಪ ಕ್ಷತ್ರಿ

Author : ರಮೇಶ ಎಸ್.ಕತ್ತಿ

Pages 64

₹ 60.00




Year of Publication: 2021
Published by: ಬೆರಗು ಪ್ರಕಾಶನ
Address: ಕಡಣಿ, -586202, ಆಲಮೇಲ ತಾಲೂಕು, ವಿಜಯಪುರ ಜಿಲ್ಲೆ
Phone: 7795341335

Synopsys

ಲೇಖಕ ರಮೇಶ್ ಎಸ್. ಕತ್ತಿ ಅವರ ಕೃತಿ-’ಕಲ್ಲಪ್ಪ ಕ್ಷತ್ರಿ’. ಆಶುಕವಿ ಬಿರುದಾಂಕಿತ ಕಲ್ಲಪ್ಪ ಕ್ಷತ್ರಿ ಅವರ ಜೀವನ ಚಿತ್ರಣವನ್ನು ಒಳಗೊಂಡಿದೆ.  ನೋಡಿದ ತಕ್ಷಣ ಪದಕಟ್ಟಿ ಹಾಡುವ ಆಶುಕವಿಯಾಗಿ ಹೆಸರು ಪಡೆದಿದ್ದವರು. ಕೆಳವರ್ಗದ ಈ ಗಾಯಕ, ಕವಿಗೆ ಹಲವು ಬಿರುದುಗಳು ಬಂದಿದ್ದು ಉಲ್ಲೇಖಿಸಲಾಗಿದೆ. ರಾಷ್ಟ್ರಪತಿಯಿಂದ ಬಹುಮಾನ ಪಡೆದುದನ್ನು ವಿಮರ್ಶಕ ಡಾ. ಎಂ. ಜಿ. ಬಿರಾದಾರ ಉಲ್ಲೇಖಿಸುತ್ತಾರೆ. ಪ್ರತಿ ಊರುಗಳಲ್ಲೂ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಾರೆ. ಹಲವು ಪ್ರಶಸ್ತಿಗಳು ಸರಕಾರ ಮತ್ತು ಸಂಘಸಂಸ್ಥೆಗಳು ನೀಡಿದ್ದನ್ನು ನೋಡಿದರೆ ಅವರ ವಿದ್ವತ್ತನ್ನು ಎತ್ತಿ ತೋರಿಸುತ್ತದೆ. ಅಪ್ಪಟ ದೇಶಪ್ರೇಮಿಯಾಗಿದ್ದ ಕಲ್ಲಪ್ಪ ಬ್ರಿಟಿಷರ ವಿರುದ್ಧವೇ ಪದ ಕಟ್ಟಿ ಹಾಡಿ ಸ್ವಾಭಿಮಾನ ಮೆರದಿದ್ದ. ಚೀನಿ ಯುದ್ಧದ ಸಂದರ್ಭದಲ್ಲೂ ಗೀಗೀ ಹಾಡು ಕಟ್ಟಿ ದೇಶಾಭಿಮಾನ ಪ್ರಕಟಿಸಿದ್ದ. ಡಪ್ಪಿಡಿದು ಹಾಡಲು ನಿಂತರೆ ದಿನವಿಡೀ ಸಾಲುತ್ತಿರಲಿಲ್ಲ. ಕಂಡಿದ್ದನ್ನು ಪದವಾಗಿ ರಾಗವಾಗಿ ಹಾಡುತ್ತಿದ್ದ, ಹೋದಕಡೆಗಳಲೆಲ್ಲ ನೋಡಿದ್ದನ್ನು ವಸ್ತುವಾಗಿಸಿ, ಪದವಾಗಿಸಿ, ರಾಗವಾಗಿಸಿ ಹಾಡುವ ಅದ್ಭುತ ಕವಿಗಾರನಾಗಿದ್ದ. ‘ನಾವು ನಮ್ಮ ಸಾಧಕರ ಮಾಲೆ’ಗೆ ಡಾ. ರಮೇಶ ಎಸ್.ಕತ್ತಿಯವರು ಈ ಬರಹ ನೀಡಿದ್ದಾರೆ.

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books