ಕತ್ತಿಯ ಅಲಗು

Author : ರಮೇಶ ಎಸ್.ಕತ್ತಿ

Pages 140

₹ 150.00




Year of Publication: 2020
Published by: ಬೆರಗು ಪ್ರಕಾಶನ
Address: ವಿನಾಯಕ ನಗರ, ವಿಜಯಪುರ, ಆಲಮೇಲ 586 202
Phone: 7795341335

Synopsys

ಲೇಖಕ ರಮೇಶ್ ಎಸ್ ಕತ್ತಿ ಅವರ ‘ಕತ್ತಿಯ ಅಲಗು’ ವಿಮರ್ಶೆಗಳ ಸಂಕಲನವಾಗಿದೆ. ವಿಮರ್ಶಕರಾದ ಶ್ರೀಶೈಲ ನಾಗರಾಳ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಎಚ್.ಟಿ.ಪೋತೆ ಅವರು ಈ ಸಂಕಲನ ಬೆನ್ನುಡಿ ಬರೆದಿದ್ದಾರೆ. ಪೋತೆಯವರು ಹೇಳುವಂತೆ,‘ ಈ ಕೃತಿಯಲ್ಲಿನ ಹನ್ನೆರಡು ವಿಮರ್ಶಾತ್ಮಕ ಲೇಖನಗಳು ತತ್ಕಾಲಿನ ತಲ್ಲಣ, ಆತಂಕ, ಮತ, ಧರ್ಮ, ಪಂಥಗಳಲ್ಲಿನ ಅಸಹಿಷ್ಣುತೆ ಕುರಿತಾದ ವಿಭಿನ್ನ ದೃಷ್ಟಿಕೋನವುಳ್ಳ ವಿದ್ವಾಂಸರ, ಕಥೆಗಾರರ, ಲೇಖಕರ ಚಿಂತನೆ, ಮೌಲ್ಯಗಳನ್ನು ಸಾಂಸ್ಕೃತಿಕ ನೆಲೆ ಕೃತಿಗಳಲ್ಲಿ ಮೂಡಿ ಬಂದ ಪ್ರಗತಿಪರ ವಿಚಾರಗಳನ್ನು ಮತ್ತು ಆಧುನಿಕ ಮಹಿಳೆಯರ ಧ್ವನಿಯನ್ನು ಸಾಹಿತ್ಯಿಕವಾಗಿ ಒರೆಗೆ ಹಚ್ಚಿದ್ದಾರೆ. ಈ ನಿಟ್ಟಿನಲ್ಲಿ ಳೇಖಕ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಾ, ನಾಡು, ನುಡಿ, ಸಂಸ್ಕೃತಿಗಾಗಿ ಶ್ರಮಿಸಲಿ ಎಂದು ಃಆರೈಸುವೆ’ ಎಂದಿದ್ದಾರೆ.

About the Author

ರಮೇಶ ಎಸ್.ಕತ್ತಿ
(28 August 1978)

ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ:  ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ.   ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...

READ MORE

Related Books