About the Author

ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್‌ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ವಿಲಾಸ, ಇವನಾರವ, ಪುರಾಣದ ರೂಪಕಗಳು, ದೇವರ ವಿರಾಟ ರೂಪ, ಲೋಫರ್ ಸ್ಯಾಮನ ಪ್ರೇಮ ಪ್ರಸಂಗ, ಸತ್ಯಕಾಮ ಮತ್ತು ಢುಂಢಿ – ಅರಣ್ಯಕನೊಬ್ಬ ಗಣಪತಿಯಾದ ಕತೆ. 

ಮಕ್ಕಳ ಕುರಿತಾದ ಪುಸ್ತಕಗಳು:  ಬೆಳೆಯುವ ಪೈರು, ಬಿತ್ತಿದಂತೆ ಬೆಳೆ, ಮಕ್ಕಳಿರಲ್ಲವ್ವ, ಆಡಿ ಬಾ ನನ್ನ ಕಂದ, ಖಾಲಿ ಸ್ಲೇಟು, ಹರೆಯದ ಹರವು, Learn to learn. 

ಮಗುತನ ಜತನ ಮಾಲಿಕೆಯಲ್ಲಿ 10 ಸಂಪುಟಗಳು: ಶಿಶುಪ್ರಧಾನ,ಶಿಶುಬಲ, ಶಿಶುಗಲಿಕೆ, ಶಿಶುಗಣ್ಣು ,ಶಿಶುಮನ ,ಶಿಶುಪಾಲ,ಶಿಶುತನ,ಶಿಶುವರಳಿ ಹರೆಯವಾಗಿ ಶಿಶುಮತಿ,ಶಿಶುವಿಹಾರ ,ರಂಗಭೂಮಿ.

ನಾಟಕಗಳ ರಚನೆ :ಬೆರಳ್ಗೆ ಕೊರಳ್, ಸತ್ಯಕಾಮ, ಒಂದಾನೊಂದು ಕಾಲದಲ್ಲಿ, ಕೊನೆಯ ಅಂಕ, ಶ್ರೀಮತಿ ಜಾನಕಿ ರಾಂ, ದ ಪ್ರಾಫೆಟ್ (ಖಲೀಲ್ ಗಿಬ್ರಾನ್), ವಾರಿಯರ್ಸ್ ಆಫ್ ಲೈಟ್ (ಪಾವ್ಲೋಕೊಲೋ), ಸಿದ್ಧಾರ್ಥ (ಹರ್ಮನ್ ಹೆಸ್).

ಸಂಗೀತ : ಜೋ ಜೋ ಲಾಲಿ ಮತ್ತು ದೂರಿ ದುದ್ದೂರಿ ಎಂಬ ಸಂಗೀತ ಸಂಗ್ರಹಗಳ ಜೊತೆಗೆ ಅಂತರಾಕ್ಷಿ, ಭೂಮಿ, ದ ಲಾಸ್ಟ್ ಲೀಫ್, ಒನ್ಸ್ ದೇರ್ ವಾಸ್ ಎ ಕಿಂಗ್, ಆನಂದ ಹರಿಕೃಷ್ಣ ಇತ್ಯಾದಿ.



 

 

ಯೋಗೇಶ್ ಮಾಸ್ಟರ್‌

(20 Dec 1968)

BY THE AUTHOR