ಢುಂಢಿ - ಅರಣ್ಯಕನೊಬ್ಬ ಗಣಪತಿಯಾದ ಕತೆ

Author : ಯೋಗೇಶ್ ಮಾಸ್ಟರ್‌

Pages 360

₹ 160.00




Year of Publication: 2013
Published by: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ
Address: 899, 19ನೇ ತಿರುವು, ಜ್ಞಾನಭಾರತಿ 2ನೇ ಹಂತ, ಮರಿಯಪ್ಪನ ಪಾಳ್ಯ, ಬೆಂಗಳೂರು- 560056
Phone: 08880660347

Synopsys

‘ಢುಂಢಿ’ ಅರಣ್ಯಕನೊಬ್ಬ ಗಣಪತಿಯಾದ ಕಥೆ ಲೇಖಕ, ಯೋಗೇಶ್ ಮಾಸ್ಟರ್ ಅವರ ಕಾದಂಬರಿ. ಭಾರತವೇ ಮೊದಲಾಗಿ ವಿಶ್ವದ ಇತರ ಭಾಗಗಳಲ್ಲಿಯೂ ಕೂಡ ಪೌರಾಣಿಕ ಕಥನಗಳ ಮೂಲಗಳನ್ನು ಸಂಶೋಧಿಸಲು ಸಾಮಾನ್ಯ ಜನರು ಹಿಂಜರಿಯುತ್ತಾರೆ. ಅಂತಹ ಪರೀಕ್ಷೆಗಳು ಅವರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುತ್ತದೆ ಅಥವಾ ಮೌಲ್ಯಗಳನ್ನು ಅಪವಿತ್ರಗೊಳಿಸುತ್ತವೇನೋ ಎಂಬಂತಹ ಮಡಿವಂತಿಕೆಯ ಭಾವವಿದೆ. ಈ ಪೌರಾಣಿಕ ಕಥಾನಕಗಳು - ಯಾರೋ ಕೆಲಸಕ್ಕೆ ಬಾರದ ಗೂಡು ಹರಟೆ ಮಲ್ಲರು ಹೇಳಿರುವಂತಹ ವಿಷಯಗಳಲ್ಲ. ಅವುಗಳು ಅಧ್ಯಯನ ಯೋಗ್ಯವಾಗಿದ್ದು, ಸೂಕ್ಷ್ಮ ಸತ್ಯಗಳೂ, ಹಾಗೂ ಅನೇಕ ಸಾಂಸ್ಕೃತಿಕ ವಿಚಾರಗಳೂ ಅವುಗಳಲ್ಲಿರುವ ನಮ್ಮ ಪುರಾಣಗಳನ್ನು ಅಧ್ಯಯನ ಯೋಗ್ಯವಾಗಿ ಪರಿಗಣಿಸಿ ಪರಿಶೀಲಿಸಿದರಿಂದ ಗತಕಾಲದ ಸತ್ಯಗಳು, ನಮಗೆ ಪಥ್ಯವಾದರೂ, ಅಸ್ಪಷ್ಟವಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಸಸ್ಯಗಳು ಗೋಚರವಾಗುತ್ತವೆ.

ಢುಂಢಿ, ಅರಣ್ಯಕನೊಬ್ಬ ಗಣಪತಿಯಾದ ಕಥೆಯಲ್ಲಿ, ಯೋಗದ ಮಾಸ್ಟರ್ ಗಣಪತಿಗೆ ಸಂಬಂಧಿಸಿದ ಪೌರಾಣಿಕ ಮತ್ತು ಸಂಶೋಧಿತ ಅಂಶಗಳ ನಡುವೆ ತಾಳೆ ನೋಡಲು ಯತ್ನಿಸಿದ್ದಾರೆ. ಧಾರ್ಮಿಕವಾಗಿ ಅಲ್ಲದೇ ಗಣಪತಿಯನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹೋಗಲು ಯತ್ನಿಸಿದ್ದಾರೆ. ಪುರಾಣದ ಆನೆ ತಲೆಯ ಗಣಪತಿಯ ಬಗ್ಗೆ ಸದಾ ವಿವರಣೆ ನೀಡಿದ್ದಾರೆ. ಅವರ ವಿಚಾರಗಳು ಓದುಗರಿಗೆ ಆಶ್ವರ್ಯವಾಗುವುದೂ ಅಥವಾ ಆಘಾತವಾಗುವುದೋ ಅವರವರ ಮನೋಧರ್ಮವನ್ನು ಅವಲಂಬಿಸುತ್ತದೆ. ದೇವಿಪ್ರಸಾದ್ ಚಟ್ಟೋಪಾಧ್ಯಾಯರ ಲೋಕಾಯತ ಪುಸ್ತಕದ ಗಣಪತಿಯ ಅಧ್ಯಾಯವೂ, ಪಾಲ್ ಬಿ ಕೋರ್ಟ್ ರೈಟ್‌ರವರ ಗಣೇಶ ಪುಸ್ತಕವೂ ಅವರ ಢುಂಢಿಗೆ ಮುಖ್ಯ ಸರಕನ್ನು ಒದಗಿಸಿವೆ. ಗಣಪತಿ, ತೊಂದರೆಗಳನ್ನು ತಂದೊಡ್ಡುವ ವಿಘ್ನೇಶ್ವರನಾಗಿದ್ದವನು, ಶುಭವನ್ನು ಉಂಟುಮಾಡುವ ಗಣಪತಿಯಾಗಿ ಹೇಗೆ ಬದಲಾದ ಎಂಬ ಸಂಶೋಧನಾ ಕಥೆಯೇ ರೋಚಕ, ಅದೇ ರೀತಿ, ಶೂದ್ರರ ಹುಡುಗ ಢುಂಢಿ ಗಣಪತಿಯಾಗಿ ಹೇಗೆ ಪೂಜಿತನಾದ ಎಂಬ ಕಥನವೇ ಈ ಕಾದಂಬರಿ.

ಪುರಾಣದ ಕತೆಯನ್ನು ವಾಸ್ತವಿಕ ನೆಲೆಗಟ್ಟಿನಿಂದಲೂ, ಸಾಂಸ್ಕೃತಿಕ ಮತ್ತುಸಾಮಾಜಿಕ ನೆಲೆಗಟ್ಟಿನಿಂದಲೂ ನೋಡುವ ಪ್ರಯತ್ನ ಕಾದಂಬರಿಯದ್ದಾಗಿದೆ. ಗಣಪತಿಯ ಮೂಲವನ್ನು ಅರಣ್ಯಕರ ಅಥವಾ ಬುಡಕಟ್ಟುಗಳ ಸಮುದಾಯದಲ್ಲಿ ಗುರುತಿಸುವ ಲೇಖಕರು ಆರ್ಯರ ಆಗಮನವು ಉಂಟುಮಾಡಿದ ಸಂಘರ್ಷಗಳನ್ನು ಗುರುತಿಸುವ ಯತ್ನ ಮಾಡುತ್ತಾರೆ. 

About the Author

ಯೋಗೇಶ್ ಮಾಸ್ಟರ್‌
(20 December 1968)

ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್‌ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...

READ MORE

Related Books