ಢುoಢೀ; ಅರಣ್ಯಕನೊಬ್ಬ ಗಣಪತಿಯಾದ ಕಥೆ

Author : ಯೋಗೇಶ್ ಮಾಸ್ಟರ್‌

Pages 254

₹ 175.00
Year of Publication: 2013
Published by: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ
Address: 899, 19ನೇ ಮುಖ್ಯರಸ್ತೆ, ಜ್ಞಾನಭಾರತಿ 2ನೇ ಹಂತ, ಮರಿಯಪ್ಪನಪಾಳ್ಯ, ಬೆಂಗಳೂರು- 56.

Synopsys

ʼಢುoಢೀ; ಅರಣ್ಯಕನೊಬ್ಬ ಗಣಪತಿಯಾದ ಕಥೆʼ ಕಾದಂಬರಿಯನ್ನು ಲೇಖಕ ಯೋಗೇಶ್‌ ಮಾಸ್ಟರ್‌ ರಚಿಸಿದ್ದಾರೆ. ಆದಿವಾಸಿ ಸಮಾಜದಿಂದ ಆಯ್ದುಕೊಂಡ ಲಕ್ಷಣಗಳು, ಅಚಾರ ವಿಚಾರಗಳು,ಪದ್ಧತಿಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಇಲ್ಲಿನ ಕತೆ ಕಾಲ್ಪನಿಕವಾಗಿದ್ದರೂ ಜನರಿಗೆ ಸಂಬಂಧಿಸಿದ ಸತ್ಯಗಳು ಅಡಗಿಕೊಂಡಿವೆ. ಗನಪತಿ ಅರಣ್ಯ ಜನರಿಂದ ಅರಾಧಿಸಲ್ಪಟ್ಟ ದೇವತೆ. ಹೀಗಾಗಿ ಅರಣ್ಯದ ಜನರ ನಡುವೆ ಕತೆಯು ಸಾಗುತ್ತದೆ. ಗಣಪತಿಯ ಬಗೆಗೆ ಇಂಗ್ಲೀಷ್‌ ಹಾಗೂ ಕನ್ನಡದಲ್ಲಿರುವ ಹಲವಾರು ಸಾಹಿತ್ಯಗಳನ್ನು ಸಂಗ್ರಹಿಸಿ ಈ ಕಾದಂಬರಿಯನ್ನು ರಚಿಸಲಾಗಿದೆ ಎಂದು ಈ ಕೃತಿಯ ಮುನ್ನುಡಿಯಲ್ಲಿ ವಿವರಿಸಲಾಗಿದೆ. ಪುರಾಣದ ರೋಚಕತೆಯ ಜೊತೆಗೆ ಸಂಶೋಧನಾ ಸಾಹಿತ್ಯವನ್ನೂ ಮಿಶ್ರಿಸಿ ಲೇಖಕ ಯೋಗೇಶ್‌ ಮಾಸ್ಟರ್‌ ಕಥೆ ಹೆಣೆದಿದ್ದಾರೆ.

About the Author

ಯೋಗೇಶ್ ಮಾಸ್ಟರ್‌
(20 December 1968)

ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್‌ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.   ...

READ MORE

Related Books