1942ರ ಸಮಯದ ಕರ್ನಾಟಕದಲ್ಲಿ ನಡೆದಂತಹ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳು ಇಂದಿಗೂ ಬೇರೆ ಬೇರೆ ರೀತಿಗಳಲ್ಲಿ ಪ್ರತಿಫಲಿಸುವಂತೆ ತೋರುತ್ತದೆ. ಅಸೂಕ್ಷ್ಮವಾದ ಧಾರ್ಮಿಕ ಮುಖಂಡರು ಮತ್ತು ಕೋಮುವಾದಿಗಳು ಸಮಾಜದಲ್ಲಿ ಶಾಂತಿ ಕದಡುವಂತಹ ಕೆಲಸಕ್ಕೆ ಮುಂದಾದರೆ, ಎಲ್ಲಾ ವೈರುಧ್ಯಗಳ ನಡುವೆ ಪ್ರೇಮಿಗಳು ತಮ್ಮ ಒಲವನ್ನು ಜೀವನದ ಸಾಕ್ಷಾತ್ಕಾರವನ್ನಾಗಿಸಿಕೊಳ್ಳಲು ನೋಡುತ್ತಾರೆ. ಭಾರತದಲ್ಲಿ ಬ್ರಿಟಿಷ್ ಸರ್ಕಾರ ಹೊಂದಿದ್ದಂತಹ ಸಕಾರಾತ್ಮಕ ಮತ್ತು ನಕಾರಾತ್ಮಕ ಮುಖಗಳೆರಡನ್ನೂ ಅನಾವರಣ ಮಾಡುವ ಕಾದಂಬರಿ ಸ್ವಾತಂತ್ರ್ಯ ಪೂರ್ವ ಭಾರತದ ಸಮಾಜವನ್ನು ಕಟ್ಟಿಕೊಡುತ್ತದೆ.
ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...
READ MOREಪ್ಯಾರೇ ಪಾಳ್ಯ ಕೃತಿಯ ಕುರಿತು ಲೇಖಕರಾದ ಯೋಗೇಶ್ ಮಾಸ್ಟರ್ ಇವರ ನುಡಿಗಳು