ಕೊರೋನ ತಂದ ಅನಿವಾರ್ಯತೆಗಳು

Author : ಅಮ್ಮಸಂದ್ರ ಸುರೇಶ್

Pages 96

₹ 110.00
Year of Publication: 2021
Published by: ಸಿರಿ ಸಮೃದ್ಧಿ ಪ್ರಕಾಶನ
Address: # 315. ಎಚ್ ಪಿಓ ಮತ್ತು ಆರ್ ಎಂಎಸ್ ಬಡಾವಣೆ, ಶಕ್ತಿನಗರ, ಮೈಸೂರು-570029
Phone: 919448402346

Synopsys

ಡಾ. ಅಮ್ಮಸಂದ್ರ ಸುರೇಶ್ ಅವರ ಕೃತಿ-ಕೊರೋನ ತಂದ ಅನಿವಾರ್ಯತೆಗಳು. ಕೋವಿಡ್-19 ದೇಶದ ವಿವಿಧ ಕ್ಷೇತ್ರದ ಮೇಲೆ ಬೀರಿದ ಪರಿಣಾಮಗಳ ಕುರಿತು ವಿವರಗಳನ್ನು ಈ ಪುಸ್ತಕ ಒದಗಿಸುತ್ತದೆ. ಉದಯಕಾಲ ದಿನಪತ್ರಿಕೆಯಲ್ಲಿ ಪ್ರಕಟವಾದ 22 ಲೇಖನಗಳ ಸಂಗ್ರಹವಿದು.  ಸ್ವರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸುವವರಿಗೆ ಹಾಗೂ ಸಾಮಾನ್ಯ ಜ್ಞಾನದ ಕುರಿತು ಆಸಕ್ತಿಯುಳ್ಳವರಿಗೆ ಉತ್ತಮವಾದ ಮಾಹಿತಿಗಳನ್ನು ಒದಗಿಸುತ್ತದೆ. ಶಿಕ್ಷಣ, ಪ್ರವಾಸ, ಪತ್ರಿಕೋದ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಕೃಷಿ, ಡಿಜಿಟಲ್ ಮಾಧ್ಯಮ ಹೀಗೆ ಎಲ್ಲಾ ರಂಗಗಳ ಮೇಲೆ ಕೊರೋನಾ ಬೀರಿದ ಪರಿಣಾಮಗಳನ್ನು ಅಂಕಿ-ಅಂಶಗಳ ಸಮೇತ ಲೇಖಕರು ವಿವರಿಸಿದ್ದಾರೆ

 

About the Author

ಅಮ್ಮಸಂದ್ರ ಸುರೇಶ್

ಡಾ. ಅಮ್ಮಸಂದ್ರ ಸುರೇಶ ಅವರು ಮೂಲತಃ ತುಮಕೂರು ಜಿಲ್ಲೆಯ ಅಮ್ಮಸಂದ್ರದವರು. ಪತ್ರಿಕೋದ್ಯಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಹೆಚ್,ಡಿ ಪದವೀಧರರು. ಮಾಧ್ಯಮ ವಿಶ್ಲೇಷಕರು. ಹವ್ಯಾಸಿ ಅಭಿವೃದ್ಧಿ ಪತ್ರಕರ್ತರು. ಪ್ರಮುಖ ಅಂಕಣ ಬರಹಗಾರರೂ ಆಗಿದ್ದಾರೆ.  ಪ್ರಸ್ಥುತ ರಾಜ್ಯ ಮಟ್ಟದ ದಿನಪತ್ರಿಕೆ ಉದಯಕಾಲ ಮತ್ತು ವೆಬ್ ನ್ಯೂಸ್ ಪೋರ್ಟಲ್ ಕರ್ನಾಟಕ ‘ಕಹಳೆ ಡಾಟ್ ಕಾಂ’ಗೆ ನಿಯಮಿತವಾಗಿ ಅಂಕಣ ಬರೆಯುತ್ತಾರೆ. ಮಾಧ್ಯಮ ಲೋಕ ಎಂಬ ಯೂಟ್ಯೂಬ್ ವಾಹಿನಿ ನಡೆಸುತ್ತಿದ್ದು, ಮುದ್ರಣ ಮಾಧ್ಯಮ, ಅಂತರ್ ಜಾಲ ಪತ್ರಿಕೋದ್ಯಮ, ಸಾಮಾಜಿಕ ಮಾಧ್ಯಮ ಹೀಗೆ ಮಾಧ್ಯಮದ ಬಹುತೇಕ ಕ್ಷೇತ್ರಗಳಲ್ಲಿ ಶ್ರಮಿಸುತ್ತಿದ್ದಾರೆ. ಕೃತಿಗಳು: ಕನ್ನಡ ದಿನಪತ್ರಿಕೆಗಳಲ್ಲಿ ಕೃಷಿ ಸುದ್ಧಿ(2013), ಡಾ.ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ (2020), ಕೊರೋನಾ ತಂದ ಅನಿವಾರ್ಯತೆಗಳು(2020) ...

READ MORE

Related Books