ಪತ್ರಕರ್ತನ ಬರಹಗಳು

Author : ಗಿರಿಜಾ ಎಸ್. ದೇಶಪಾಂಡೆ

Pages 128

₹ 6.00




Year of Publication: 1980
Published by: ಸುಂದರ ಪ್ರಕಾಶನ
Address: # 350 ಮಹಾಲಕ್ಷ್ಮಿ ಲೇಔಟ್‌, ಬೆಂಗಳೂರು-560018

Synopsys

'ಪತ್ರಕರ್ತನ ಬರಹಗಳು' ಲೇಖಕ ಜಿ ಸತ್ಯನಾರಾಯಣ ಅವರ ಲೇಖನಗಳ ಸಂಕಲನ. ಲೇಖಕರು ಪತ್ರಕರ್ತರು. ಪತ್ರಿಕೆಗಳಲ್ಲಿ ಪ್ರಕಟಿತ ಅವರ ಬರಹಗಳನ್ನು ಸಂಗ್ರಹಿಸಿದ್ದೇ ಈ ಕೃತಿ. ಒಟ್ಟು 35 ಲೇಖನಗಳಲ್ಲಿ ಕೆಲವು ವಾರ್ತಾ ಪತ್ರಗಳು, ಒದುಗನಾಗಿ ಪತ್ರಕೆಗಳಿಗೆ ಬರೆದ ಪತ್ರಗಳು, ನಾಟಕ ವಿಮರ್ಶೆಗಳು ಹಾಗೂ ಸಂದರ್ಶನಗಳನ್ನು ಒಳಗೊಂಡಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ರೀತಿಯಲ್ಲೇ ಲೇಖನಗಳನ್ನು ಪ್ರಕಟಿಸಲಾಗಿದೆ. ಜನಜೀವನದ ಎಲ್ಲ ಅಂಶಗಳನ್ನು ಸಮಾಜದ ಕಲ್ಯಾಣ, ಸಾಹಿತ್ಯ, ಕಲೆ, ರಾಜಕೀಯ, ಚಲನಚಿತ್ರ ಹೀಗೆ ಒಗ್ಗೂಡಿಸಿ ಸಂಕಲನ ರಚಿಸಲಾಗಿದೆ. ಕೆಲವು ಕಟುವಾದ ರಾಜಕೀಯ ಟೀಕೆ, ವ್ಯಂಗ್ಯೋಕ್ತಿಗಳಿದ್ದರೂ ಗಾಂಭೀರ್ಯದಿಂದ ಕೂಡಿದೆ.

 

About the Author

ಗಿರಿಜಾ ಎಸ್. ದೇಶಪಾಂಡೆ

ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರು ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ಊರಿನವರು. ಹಾವೇರಿಯಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಬಿ.ಇಡಿ ಪದವೀಧರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಈಗ ನಿವೃತ್ತರು. ಇವರು ಬರೆದ ಲೇಖನಗಳು, ಸಂದರ್ಶನಗಳು, ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೆಂಗಳೂರಿನಲ್ಲಿ ವಾಸವಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸದಸ್ಯರಾಗಿದ್ದಾರೆ. ಕೃತಿಗಳು: . ಸಂವಾದಿನಿ (32 ಮಹಿಳಾ ಸಾಧಕರ ಪರಿಚಯ), ಸಂಜೀವಿನಿ (ಆರೋಗ್ಯ ಲೇಖನಗಳು), ಜೇನುಗೂಡು (ಆತ್ಮಕಥೆ) ಪ್ರಶಸ್ತಿ-ಪುರಸ್ಕಾರಗಳು: ಡಿ.ಎಸ್.ಮ್ಯಾಕ್ಸ್ ಕನಸ್ಟ್ರಕ್ಶನ್ (2019) ಕಂಪನಿಯವರಿಂದ ರಾಜ್ಯೋತ್ಸವದಂದು ಶ್ರೇಷ್ಟ ಅಂಕಣ ಬರಹಗಾರ್ತಿ ಸಾಹಿತ್ಯಶ್ರೀ ಪ್ರಶಸ್ತಿ, ಕನ್ನಡ ...

READ MORE

Related Books