ದೀಪದ ಮಲ್ಲಿಯರು

Author : ಮಾಲತಿ ಭಟ್

Pages 140

₹ 130.00




Year of Publication: 2022
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು, ಕೋಡೂರು ಅಂಚೆ- 577418 ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
Phone: 7338437666

Synopsys

ಲೇಖಕಿ ಮಾಲತಿ ಭಟ್ ಅವರ ಕೃತಿ ದೀಪದ ಮಲ್ಲಿಯರು. ಲೇಖಕ ವಸುಂಧರಾ ಭೂಪತಿ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, `ದೀಪದ ಮಲ್ಲಿಯರು' ಒಂದು ಅಪರೂಪದ ವೈಶಿಷ್ಟ್ಯಪರ‍್ಣ ಕೃತಿ. ಜೀವನದಲ್ಲಿ ಇನ್ನು ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಶೂನ್ಯ ಸ್ಥಿತಿಯಲ್ಲಿದ್ದ ಮಹಿಳೆಯರು ತಮ್ಮ ಇಚ್ಛಾಬಲದಿಂದ ಸವಾಲುಗಳನ್ನು ಗೆದ್ದು ಸಾಧನೆ ಮಾಡಿದ ಸಂಗತಿಗಳನ್ನು ಪತ್ರರ‍್ತೆ, ಲೇಖಕಿ ಮಾಲತಿ ಭಟ್ ನಿರೂಪಿಸುತ್ತಾ ಅವರ ವ್ಯಕ್ತಿಚಿತ್ರಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. `ದೀಪದ ಮಲ್ಲಿಯರು' ಔಚಿತ್ಯಪರ‍್ಣವಾದ ಪ್ರಾತಿನಿಧಿಕ ಶರ‍್ಷಿಕೆ. ದೀಪ ಬೆಳಕಿನ ಸಂಕೇತ, ಜ್ಞಾನದ ಸಂಕೇತ. ಬೆಳಕು ಮತ್ತು ಜ್ಞಾನ ಇವೆರಡರ ಪರ‍್ವ ಸ್ಥಿತಿ ಅಜ್ಞಾನ ಮತ್ತು ಕತ್ತಲು. ಇಂದು ಜಗತ್ತಿನಲ್ಲಿ ಎಲ್ಲ ದೇಶಗಳಲ್ಲೂ ಬಹುತೇಕವಾಗಿ ಬದುಕು ಗಂಡಾಳ್ವಿಕೆಯದೇ ಆಗಿದೆ. ಭಾಷೆಗಳ ರಚನೆಗಳನ್ನೇ ನೋಡಿದರೂ ಹೆಚ್ಚು,ಕಡಿಮೆ ಜಗತ್ತಿನ ಎಲ್ಲ ಭಾಷೆಗಳೂ ಗಂಡು ಪ್ರಾಧಾನ್ಯತೆಯ ಸಂಭೋದನೆಯ ಪ್ರಯೋಗರೂಪಗಳೇ ಆಗಿವೆ. ಮನುಷ್ಯಕುಲ, ಮಾವನಕುಲ ಇವೆಲ್ಲವೂ ಹೆಣ್ಣಿನ ಗೈರುಹಾಜರಿಯ ಪ್ರಯೋಗಗಳೇ. ಹೀಗಾಗಿ ಹೆಣ್ಣಿಗೆ ಬದುಕೆಂಬುದು ಹೆಚ್ಚು ಬೆಳಕಿಗೆ ತೆಗೆದುಕೊಂಡದ್ದಲ್ಲ. ಆದರೆ, ಜಗತ್ತಿನ ಯಾವುದೇ ಸಮುದಾಯದ ಸಂಸ್ಕೃತಿ, ನಾಗರಿಕತೆಯ ಬೆಳವಣಿಗೆಯ ಹಿಂದೆ ಹೆಣ್ಣಿನ ದುಡಿಮೆ, ಹೆಣ್ಣಿನ ಧೀಶಕ್ತಿ ಕಾರಣವಾಗುತ್ತದೆಂಬುದು ಜನಜನಿತ. ಕುಟುಂಬ ನರ‍್ವಹಣೆಯಿಂದ ಹಿಡಿದು ಸಾಮಾಜಿಕ ಸ್ವಾಸ್ಥವನ್ನು ಕಾಪಾಡುವ ಎಲ್ಲ ಕ್ರಿಯೆಗಳಲ್ಲೂ ಹೆಣ್ಣಿನ ಪಾತ್ರ ಪ್ರಧಾನವಾಗಿರುತ್ತದೆ. ಆದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ರೀತಿ ಪುರುಷ ಪ್ರಾಧಾನ್ಯತೆ ಮೆರೆದಿದೆ. ಆದ್ದರಿಂದಲೇ ಈ ಅರಿವಿನ ಎಚ್ಚರದಲ್ಲಿ `ದೀಪ' ಎನ್ನುವುದನ್ನು ಮಾಲತಿ ಭಟ್ ಬಳಸಿದ್ದಾರೆ. ಅದನ್ನು ಬೆಳಗುವ ಧೀಶಕ್ತಿ ಎಂದರೆ ಮಹಿಳೆ ಎಂಬ ಅರಿವಿನಲ್ಲಿ `ದೀಪದ ಮಲ್ಲಿಯರು' ಎಂದು ಪ್ರಯೋಗಿಸಿದ್ದಾರೆಂದು ನನ್ನ ಅನಿಸಿಕೆ. ಹೀಗಾಗಿ ಇಡೀ ಶರ‍್ಷಿಕೆಯೇ, ಪುರುಷಾಂಹಕಾರದ ಅಂಧಕಾರದ ಕೋಟೆಯೊಳಗೆ ಇದ್ದು ಅದನ್ನು ಉಲ್ಲಂಘಿಸಿ ಹೊರಬಂದ ಜ್ಞಾನದ ಬೆಳಕಿನ ಚೇತನಗಳಾಗಿ ಸಾಧನೆಗೈದ ಎಲ್ಲ ಮಹಾಚೈತನ್ಯಗಳ ಪ್ರತಿಮಾರೂಪ. ಮಾಲತಿ ಭಟ್ ಅವರ ಭಾಷೆ, ನಿರೂಪಣಾ ಶೈಲಿ ಆಪ್ತವಾಗಿದ್ದು ಓದುಗರ ಮನದಲ್ಲಿ ಅಂತಃಕರಣದ ಸೆಲೆಯನ್ನು ಸ್ಫುರಿಸುತ್ತದೆ. ರ‍್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಮಹಿಳೆಯರ ನಿಜರ‍್ಥದಲ್ಲಿ ಅಸಾಧ್ಯವೆನಿಸುವ ಸಾಧನೆಯನ್ನು ತೆರೆದಿಡುವಲ್ಲಿ `ದೀಪದ ಮಲ್ಲಿಯರು' ಕೃತಿ ಯಶಸ್ವಿಯಾಗಿದೆ ಎಂಬುದಾಗಿ ಹೇಳಿದ್ದಾರೆ.

About the Author

ಮಾಲತಿ ಭಟ್

ಹಿರಿಯ ಪತ್ರಕರ್ತೆ, ಬರಹಗಾರ್ತಿ ಮತ್ತು ಆಪ್ತ ಸಮಾಲೋಚಕಿ. ಪತ್ರಿಕೋದ್ಯಮದಲ್ಲಿ 26 ವರ್ಷಗಳ ವ್ಯಾಪಕ ಅನುಭವ. `ಕನ್ನಡ ಪ್ರಭ'ದಿಂದ ವೃತ್ತಿಜೀವನ ಆರಂಭಿಸಿ ಅಲ್ಲಿ ನಾಲ್ಕು ವರ್ಷಗಳ ಕಾಲ ವರದಿಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಆನಂತರ ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 18 ವರ್ಷಗಳ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಪ್ರಜಾವಾಣಿಯ ಸುದ್ದಿಸಂಪಾದಕಿಯಾಗಿ ಕಾರ್ಯನಿರ್ವಹಿಸಿ 2018ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಪ್ರಸ್ತುತ `ಪ್ರಾಫಿಟ್ ಪ್ಲಸ್' ಪತ್ರಿಕೆಯ ಸಂಪಾದಕೀಯ ಸಲಹೆಗಾರರು. ಸಮಾಜಸೇವೆ, ಮಾನವೀಯ ಕಾರ್ಯಗಳ ಬಗ್ಗೆಯೂ ಆಸಕ್ತಿ ಹೊಂದಿರುವ ಇವರು ಆಪ್ತ ಸಮಾಲೋಚಕಿಯೂ ಹೌದು. ಮನಃಶಾಸ್ತ್ರದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದು, ಕೌನ್ಸೆಲಿಂಗ್‌ನಲ್ಲಿ ಉನ್ನತ ...

READ MORE

Related Books