ಸವಿಸ್ಮೃತಿ

Author : ಗೀತಾ ಕೃಷ್ಣಮೂರ್ತಿ



Year of Publication: 2023
Published by: ಸತ್ಪ್ರಕಾಶನ
Address: ಅಬಲಾಶ್ರಮ, ಬಸವನಗುಡಿ, ಬೆಂಗಳೂರು

Synopsys

ಗೀತಾ ಕೃಷ್ಣಮೂರ್ತಿ ಅವರ ಪ್ರಧಾನ ಸಂಪಾದಿತ ಕೃತಿ ʻಸವಿಸ್ಮೃತಿ: ವಿಧವಾ ಪುನರ್ವಿವಾಹದ ರೂವಾರಿಗಳುʼ. ಬಾ.ವೆಂ. ಶೇಷ ಅವರು ಪುಸ್ತಕದ ಗೌರವ ಸಂಪಾದಕರು. ಹೆಣ್ಣಿಗೆ ಪುನರ್‌ವಿವಾಹದ ಅವಕಾಶಗಳು ವೇದ ಪುರಾಣ ಕಾಲದಿಂದ ಇಂದಿನವರೆಗೂ ಇದೆ ಎನ್ನುವ ವಿಷಯದ ಕುರಿತು ಪ್ರಸ್ತುತ ಕೃತಿ ಚರ್ಚಿಸುತ್ತದೆ. ವೆಂಕಟವರದಯ್ಯಂಗಾರರು ಮತ್ತು ಅವರ ಪತ್ನಿ ಕೃಷ್ಣಮ್ಮ ಅವರನ್ನು ಕುರಿತು ಡಿವಿಜಿ ಅವರು ʻಜ್ಞಾಪಕ ಚಿತ್ರಶಾಲೆʼಯಲ್ಲಿ ಬರೆದ ಬರಹವನ್ನೂ ಇಲ್ಲಿ ಸೇರಿಸಿದ್ದಾರೆ. ಕೇವಲ 22 ವರ್ಷ ಬದುಕಿ, ಅನಿಷ್ಟಗಳ ವಿರುದ್ದದ ಹೋರಾಟದಲ್ಲಿ ದಂತಕಥೆಯಾದ ಹೆನ್ರಿ ಲೂಯಿಸ್‌ ವಿವಿಯನ್‌ ಡೆರೊಜಿಯೊ, ಈಶ್ವರಚಂದ್ರ ವದ್ಯಾಸಾಗರ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಧೋಂಡೋ ಕೇಶವ ಕರ್ವೆ ಮೊದಲಾದವರ ಕುರಿತ ಲೇಖನಗಳೂ ಇಲ್ಲಿವೆ. ಜೊತೆಗೆ ನಮ್ಮ ನಾಡಿನ ಸಾಹಿತಿ, ಚಿಂತಕರು ಸಮಾಜ ಸುಧಾರಕರಾದ ಬಗ್ಗೆಯೂ ವಿವರಗಳಿವೆ.

About the Author

ಗೀತಾ ಕೃಷ್ಣಮೂರ್ತಿ
(23 October 1951)

ಸಂಶೋಧನಾ ಲೇಖಕಿಯಾದ ಗೀತಾ ಕೃಷ್ಣಮೂರ್ತಿಯವರು ಕಾನೂನು, ವ್ಯಕ್ತಿತ್ವ ವಿಕಸನ, ಸಂವಿಧಾನದ ಕುರಿತಾಗಿ ಉತ್ತಮ ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು ಎಲ್.ಎಲ್.ಬಿ, ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. 1951 ಅಕ್ಟೋಬರ್ 23ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.  ಮಹಿಳೆ ಮತ್ತು ಕಾನೂನು - ನವ ಸಾಕ್ಷರರಿಗಾಗಿ, ವಿವಾಹ ಕಾನೂನು ಮಹಿಳೆ, ಕಾನೂನು ಮತ್ತು ರಾಜಕಾರಣ, ಮಹಿಳಾ ಹಕ್ಕುಗಳುಮಾನವ ಹಕ್ಕುಗಳ ನೆಲೆಯಲ್ಲಿ, ಮಹಿಳೆ ಸಮಾಜ ಮತ್ತು ಕಾನೂನು (ಲೇಖನಗಳ ಸಂಗ್ರಹ) ವ್ಯಕ್ತಿತ್ವ ವಿಕಸನ ಮತ್ತು ಕಾನೂನು, ಮೂಲಭೂತ ಹಕ್ಕುಗಳು ಒಂದು ಕಿರುಪರಿಚಯ, ಕೌಟುಂಬಿಕ ಕಾನೂನು ಸಂಗಾತಿ, ಕಾನೂನು ...

READ MORE

Related Books