ಸ್ಯಾನಿಟರಿ ಪ್ಯಾಡ್‌

Author : ಕಂಚುಗಾರನಹಳ್ಳಿ ಸತೀಶ್

Pages 80

₹ 100.00




Year of Publication: 2022
Published by: ಕಂಸ ಪ್ರಕಾಶನ
Address: ಚಿಕ್ಕಮಗಳೂರು ಕಡೂರು-577168

Synopsys

“ಸ್ಯಾನಿಟರಿ ಪ್ಯಾಡ್‌ (Only for ladies...” ಈ ಕಾದಂಬರಿಯನ್ನು ಕಂಚುಗಾರನಹಳ್ಳಿ ಎಂಬ ಸತೀಶ್ (ಕಂಸ)ರವರು ವಿಶೇಷ ರೀತಿಯಲ್ಲಿ ರಚಿಸಿ, ಓದುಗರ ಕುತೂಹಲಕ್ಕೆ ರೆಕ್ಕೆ ಮೂಡಿಸುವುದಲ್ಲದೇ, ಅವರ ಜ್ಞಾನಾರ್ಜನೆಗೂ ಕಾರಣರಾಗಿದ್ದಾರೆ. ಸಾಮಾನ್ಯ ವಾಗಿ ಕಥೆ ಕಾದಂಬರಿಗಳು ಕಪೋಲಕಲ್ಪಿತವಾಗಿದ್ದು, ವಾಸ್ತವಾಂಶಗಳಿಂದ ದೂರವೇ ಉಳಿಯುತ್ತವೆ. ಆದರೆ ಕಂಸ ಅವರು ಈ ಕಾದಂಬರಿಯಲ್ಲಿ ಜನಮನದಿಂದ ಮರೆಯಾಗಿರುವ, ಮಹಿಳೆಯರ ನಿರಂತರ ಸಂಕಟದ ವಿಷಯವೊಂದನ್ನು ಎತ್ತಿಕೊಂಡು ಕಲಾತ್ಮಕವಾಗಿ ಮತ್ತು ಸಂಶೋಧನಾತ್ಮಕವಾಗಿ ಹೆಣೆದು ಮೂಲಕ ಜನತೆಯ ಹಾಗೂ ಸರಕಾರದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ. ಮಹಿಳೆಗೆ ಋತುಸ್ರಾವದ ಪ್ರಕ್ರಿಯೆ ಪ್ರಕೃತಿ ದತ್ತವಾದದ್ದು. ಅತ್ಯಂತ ಸಹಜವಾದದ್ದು. ಅಂತಹ ಸಂದರ್ಭದಲ್ಲಿ ಕೈಗೆ ಎಟುಕಲಾರದ ಬೆಲೆ ತೆತ್ತು ಸ್ಯಾನಿಟರಿ ಪ್ಯಾಡ್ ಅನ್ನು ಖರೀದಿಸಲು ಶಕ್ತವಲ್ಲದ ವಿದ್ಯಾರ್ಥಿನಿ ಸಮೂಹ, ಕೂಲಿ ಕಾರ್ಮಿಕ ಬಡ ಮಧ್ಯಮ ವರ್ಗದ ಮಹಿಳಾ ಸಮೂಹಗಳು ಮುಜುಗರ, ಅನಾರೋಗ್ಯ, ಅಸಹಾಯಕತೆಯಿಂದ ಪರಿತಪಿಸುತ್ತವೆ. ಇದನ್ನು ನಿವಾರಿಸಿ ಮಾನರಕ್ಷಣೆ, ಆರೋಗ್ಯ ರಕ್ಷಣೆಯ ರಕ್ಷಾ ಕವಚವಾಗಿ ಸ್ಯಾನಿಟರಿ ಪ್ಯಾಡ್ ಅನ್ನು ನಿರಂತರವಾಗಿ, ಉಚಿತವಾಗಿ ಒದಗಿಸುವ ಜವಾಬ್ದಾರಿಯನ್ನು ಸರಕಾರ ಹೊರಲೇಬೇಕು ಎಂಬ ಹಕ್ಕೊತ್ತಾಯವನ್ನು ಕಾದಂಬರಿ ಸಮರ್ಥವಾಗಿ ಪ್ರತಿಪಾದಿಸುತ್ತದೆ.

About the Author

ಕಂಚುಗಾರನಹಳ್ಳಿ ಸತೀಶ್

ಕಂಚುಗಾರನಹಳ್ಳಿ ಸತೀಶ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಾರನಹಳ್ಳಿಯವರು. ತಂದೆ ಶ್ರೀನಿವಾಸ.ಕೆ.ಎನ್ ತಾಯಿ ಸುಜಾತ.ಟಿ . ಬಿ.ಎ,ಡಿ.ಎಡ್ ವಿದ್ಯಾರ್ಹತೆ ಮುಗಿಸಿ. ವೃತ್ತಿಯಲ್ಲಿ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಸೇವೆ : ಸುಮಾರು ಎರಡು ವರ್ಷಗಳಿಂದ ಕವನಗಳು,ಚುಟುಕುಗಳು,ಕಥೆಗಳು,ಆಧುನಿಕ ವಚನಗಳು,ಶಿಶು ಗೀತೆಗಳು,ನ್ಯಾನೋ ಕಥೆಗಳು,ಹಾಯ್ಕುಗಳು,ಗಝಲ್ ಗಳು,ಟಂಕಾಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಸ್ಯಾನಿಟರಿ ಪ್ಯಾಡ್ ,ಬಂಗಾರದ ಹನಿಗಳು ...

READ MORE

Related Books