ಸಮಯದ ಸದುಪಯೋಗ

Author : ಎ.ಪಿ. ಮಾಲತಿ

Pages 80

₹ 12.00




Year of Publication: 1994
Published by: ಕರ್ನಾಟಕ ಬುಕ್ ಎಜೆನ್ಸಿ
Address: ತುಂಗಾ ಕಾಂಪ್ಲೆಕ್ಸ್ , ಗಾಂಧಿನಗರ ಬೆಂಗಳೂರು - 560 009

Synopsys

ಸಮಯದ ಅಭಾವ ಎಂಬ ಕೊರತೆ ನಮ್ಮನ್ನು ಕಾಡುತ್ತಲೇ ಇರುತ್ತದೆ. ಅದರಲ್ಲೂ ,ಮಹಿಳೆಯರು ಮನೆ ಹೊರಗು ಒಳಗೂ ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ಸಮಯ ಸರಿದು ಹೋಗಿರುತ್ತದೆ. ಅಂತಹ ಗೃಹಿಣಿಯರು ಸಮಯ ಉಳಿಸಿ ಅದನ್ನು ಸಾರ್ಥಕವಾಗಿ ಸದುಪಯೋಗ ಗೊಳಿಸಿಕೊಳ್ಳುವುದು ಹೇಗೆ? ಎಂಬುದನ್ನು ಈ ಕೃತಿಯಲ್ಲಿ ನೀಡಲಾಗಿದೆ. ಮಹಿಳೆಯರಿಗಾಗಿ ರಚಿತವಾಗುವ ಪುಸ್ತಕಗಳು ಎಲ್ಲ ವಯಸ್ಸಿನ ಎಲ್ಲ ಸ್ತರದ ಮಹಿಳೆಯರನ್ನೂ ಮುಟ್ಟಬೇಕು ಎಂಬ ಆಶಯದಿಂದ ‘ಸಮಯದ ಸದುಪಯೋಗ’ ಕೃತಿಯನ್ನು ಅನುಪಮಾ ನಿರಂಜನ ಅವರು ಸಂಪಾದಿಸಿದ್ದಾರೆ.

About the Author

ಎ.ಪಿ. ಮಾಲತಿ
(06 May 1944)

ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ  ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್‌, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...

READ MORE

Related Books