ಸಾಮಾನ್ಯರ ಅಸಾಮಾನ್ಯ ಅವ್ವ

Author : ಚಂದ್ರಶೇಖರ ವಸ್ತ್ರದ

Pages 224

₹ 200.00




Year of Publication: 2023
Published by: ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್(ರಿ)
Address: 52, ಆದರ್ಶ್ ನಗರ, ಹುಬ್ಬಳ್ಳಿ

Synopsys

‘ಸಾಮಾನ್ಯರ ಅಸಾಮಾನ್ಯ ಅವ್ವ’ ಅವ್ವ ಪುಸ್ತಕ ಮಾಲೆಯ 7ನೇ ಕೃತಿ. ಈ ಕೃತಿಯನ್ನು ಲೇಖಕ ಚಂದ್ರಶೇಖರ ವಸ್ತ್ರದ ಅವರು ಸಂಪಾದಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ತಾಯಿಯ ನೆನಪಿನಲ್ಲಿ ಪ್ರಕಟಗೊಂಡ ಈ ಕೃತಿಗೆ ಮೊದಲ ಮಾತುಗಳನ್ನು ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಬರೆದಿದ್ದಾರೆ. ಕೃತಿಯ ಕುರಿತು ವಿವರಿಸುತ್ತಾ ‘ಅವ್ವ ಪುಸ್ತಕಮಾಲೆಯ ಏಳನೆಯ ಕೃತಿ ಕುಸುಮ ಸಾಮಾನ್ಯರ ಅಸಾಮಾನ್ಯ ಅವ್ವ’ ಈ ಮಾಲೆಯ ಇತರ ಕೃತಿಗಳಿಗಿಂತ ಇದು ಭಿನ್ನವಾಗಿ ನಿಲ್ಲಲು ಕಾರಣ ಇಲ್ಲಿಯ ಬಹುತೇಕ ಲೇಖಕರು ಸಾಹಿತಿಗಳಲ್ಲ, ಗೃಹಣಿ, ಒಕ್ಕಲಿಗ, ದೇವದಾಸಿ, ಪ್ರಾಧ್ಯಾಪಕ, ಸಾಮಾಜಿಕ ಕಾರ್ಯಕರ್ತ, ಕಾರ್ಯಾಲಯದ ಕರಣಿಕ, ಇಂಜನಿಯರ್, ಪೊಲೀಸ್ ಅಧಿಕಾರಿ, ಸೈನ್ಯಾಧಿಕಾರಿ ಇತ್ಯಾದಿಯಾಗಿ ವಿವಿಧ ಬಗೆಯ, ವಿವಿಧ ವೃತ್ತಿಯ, ವಿವಿಧ ಪ್ರದೇಶಗಳ ಜನರು ತಮ್ಮ ತಮ್ಮ ತಾಯಿಯ ಬಗ್ಗೆ ಬರೆದ ಹೃದ್ಯ ಲೇಖನಗಳ ಗುಚ್ಛವಿದು ಎಂದಿದ್ದಾರೆ. ಇಲ್ಲಿ ಚಿತ್ರಿತವಾದ ಬಹುತೇಕ ತಾಯಂದಿರು ಕಷ್ಟದ ಕುಲುಮೆಯಲ್ಲಿ ಬೆಂದವರು, ಅಪಮಾನದ ಅಗ್ನಿವರ್ಷದಲ್ಲಿ ಸಿಲುಕಿ ನೊಂದವರು. ಪತಿಯ ದೌರ್ಜನ್ಯಕ್ಕೆ ಒಳಗಾದ ಜೀವಗಳು ಕೆಲವು, ಕುಟುಂಬದ ಸದಸ್ಯರ ತಾತ್ಸಾರ-ಅವಹೇಳನಕ್ಕೆ ಸಿಲುಕಿದ ಅಭಾಗಿನಿಯರು ಇನ್ನು ಹಲವರು. ಆದರೆ ಪ್ರತಿಯೊಬ್ಬರೂ ನಂಜನ್ನುಣ್ಣುತ್ತಲೇ ನಲಿವನ್ನು ಮಕ್ಕಳಿಗೆ, ಮೊಮ್ಮಕ್ಕಳಿಗೆ, ನೆರೆಹೊರೆಯವರಿಗೆ ಹಂಚುತ್ತ ಬದುಕಿದ ಅಮೃತ ಮಾತೆಯರು ಎಂದಿದ್ದಾರೆ.

About the Author

ಚಂದ್ರಶೇಖರ ವಸ್ತ್ರದ

ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...

READ MORE

Related Books