ಕನ್ನಡ ಭಾಷಾ ಕೌಶಲ ಕಲಿಕೆ ಬೋಧನೆ

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 138

₹ 160.00




Year of Publication: 2023
Published by: ಕ್ರಿಯಾ ಪ್ರಕಾಶನ
Address: ಸುರಿಭವನ, 16ನೇ ಅಡ್ಡರಸ್ತೆ, 2ನೇ ಬಿ ಮುಖ್ಯರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 22234369

Synopsys

`ಕನ್ನಡ ಭಾಷಾ ಕೌಶಲ ಕಲಿಕೆ ಬೋಧನೆ’ ಅಬ್ದುಲ್‌ ರೆಹಮಾನ್‌ ಪಾಷ ಅವರ ಅಧ್ಯಯನ ಕೃತಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಭಾಷಾ ಅಧ್ಯಯನವನ್ನು ಅನುತ್ಪಾದಕ' ಎಂದು ಭಾವಿಸಲಾಗುತ್ತಿದೆ. ಮಕ್ಕಳಿಗೆ ಕೆಲವು ಕೌಶಲ್ಯಗಳನ್ನು ಕಲಿಸಿ, ಅವರಿಗೆ ಉದ್ಯೋಗವಕಾಶ ಕಲ್ಪಿಸಿಕೊಡುವುದು, ಇಲ್ಲವೇ ವಿದೇಶಗಳಿಗೆ ಕಳಿಸಿಕೊಡುವುದು ಮುಖ್ಯ ಎಂದು ಬಹುತೇಕ ಎಲ್ಲರೂ ನಂಬಿದ್ದಾರೆ. ಸ್ಪರ್ಧಾತ್ಮಕ ಆರ್ಥಿಕತೆಯ ಬೆನ್ನು ಹತ್ತಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಇದರ ಪರಿಣಾಮವೋ ಎಂಬಂತೆ ಶಿಕ್ಷಣ ಕ್ಷೇತ್ರದಲ್ಲಿ ಭಾಷಾಧ್ಯಯನ ಕಳೆಗುಂದುತ್ತಿದೆ. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಹಿರಿಯ ಗೆಳೆಯರಾದ ಅಬ್ದುಲ್ ರೆಹಮಾನ್ ಪಾಷರವರು ಭಾಷಾ ಕಲಿಕೆಯ ವಿಚಾರದಲ್ಲಿ ಮಾಡುತ್ತಿರುವ ಚಿಂತನೆಗಳಿಗೆ ಐತಿಹಾಸಿಕ ಮಹತ್ವವಿದೆ. ಈ ವಿಷಯದಲ್ಲಿ ಅವರು ಸಾಂಪ್ರದಾಯಕ ಕ್ರಮಗಳನ್ನು ತ್ಯಜಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಆಲಿಸುವುದು, ಮಾತಾಡುವುದು, ಓದುವುದು ಮತ್ತು ಬರೆಯುವುದು ಎಂಬ ನಾಲ್ಕು ಭಾಷಾ ಕೌಶಲ್ಯಗಳನ್ನು ಆಧರಿಸಿ ಈ ಕೈಪಿಡಿಯನ್ನು ಸಿದ್ಧಪಡಿಸಿದ್ದಾರೆ. ಹಾಗೆ ಮಾಡುವಾಗ ಅವರು ವಿದೇಶೀ ಚಿಂತನಾ ಕ್ರಮಗಳನ್ನು ಕಣ್ಣುಮುಚ್ಚಿ ಅನುಸರಿಸದೆ, ತಮ್ಮದೇ ಆದ ಕೆಲವು ಹೊಸ ವಿಧಾನಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಒಟ್ಟು ಚರ್ಚೆಗಳನ್ನು ಕನ್ನಡ ಭಾಷಾ ಸಂದರ್ಭದಲ್ಲಿರಿಸಿ ಚರ್ಚಿಸಿದ್ದಾರೆ. ಹೀಗಾಗಿ, ನಿಸ್ಸಂದೇಹವಾಗಿ ಕನ್ನಡಿಗರಿಗೆ ಬಹು ಇದು ಉಪಯುಕ್ತವಾದ ಕೈಪಿಡಿ ಎಂಬುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. ವರ್ತಮಾನದ ಕೆಲವು ಅಗತ್ಯಗಳನ್ನು ಪೂರೈಸುವ ಶಕ್ತಿ ಈ ಕೈಪಿಡಿಗಿದೆ. ಇಲ್ಲಿರುವ ಸಲಹೆ ಸೂಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಕನ್ನಡ ಕಲಿಕೆಯ ಸಾಧ್ಯತೆಗಳು ಬಹುವಾಗಿ ವಿಸ್ತರಿಸಿಕೊಳ್ಳಬಲ್ಲವು.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books