ಕನ್ನಡ ಸಾಹಿತ್ಯ ಕೋಶ

Author : ರಾಜಪ್ಪ ದಳವಾಯಿ

Pages 730

₹ 180.00




Year of Publication: 2006
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ಚಿಕ್ಕಪೇಟೆ, ಬೆಂಗಳೂರು

Synopsys

ಕನ್ನಡ ಸಾಹಿತ್ಯ ಪ್ರವೇಶಕ್ಕೆ ತುಂಬ ನೆರವಾಗಬಲ್ಲ, ಎಲ್ಲ ವಿವರಗಳನ್ನೂ ಒಂದೆಡೆಗೇ ಕಟ್ಟಿಕೊಟ್ಟಿರುವ ಬಹಳ ಮಹತ್ವದ ಕೃತಿ. ಏಳುನೂರಕ್ಕೂ ಹೆಚ್ಚು ಪುಟಗಳ ಈ ಕೃತಿಯ ಸಂಪಾದನೆಯ ಹಿಂದೆ ರಾಜಪ್ಪ ದಳವಾಯಿಯವರ ವ್ಯಾಪಕ ಅಧ್ಯಯನವಿದೆ. ವಿದ್ಯಾರ್ಥಿ, ವಿದ್ವಾಂಸರೆಲ್ಲರಿಗೂ ಉಪಯುಕ್ತವಾಗಬಲ್ಲ ಕೃತಿ ಇದಾಗಿದೆ. ಬೆನ್ನುಡಿಯಲ್ಲಿ, ಇದೊಂದು ಮಾರ್ಗದರ್ಶಕ ಕೃತಿ. ಸಾಹಿತ್ಯ ವಿದ್ಯಾರ್ಥಿಗಳ ಅವಶ್ಯ ಪರಾಮರ್ಶನ. ಸಾಹಿತ್ಯದ ಬಗ್ಗೆ ಸಮಗ್ರ ಗ್ರಹಿಕೆಯನ್ನು ನೀಡುತ್ತದೆ. ಕನ್ನಡ ಸಾಹಿತ್ಯದ ಹೊಸ ಸಾಧ್ಯತೆಗಳನ್ನು ನಮ್ಮ ಮುಂದೆ ಮಂಡಿಸುತ್ತದೆ ಎಂದು ಡಾ. ಅರ್ತಿಕಜೆ ಕೃಷ್ನಭಟ್ ಬರೆದಿದ್ದಾರೆ.

About the Author

ರಾಜಪ್ಪ ದಳವಾಯಿ

ಡಾ. ರಾಜಪ್ಪ ದಳವಾಯಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಅನುವನಹಳ್ಳಿಯವರು. 1962ರಲ್ಲಿ ಜನನ. ಕನ್ನಡ ಪ್ರಾಧ್ಯಾಪಕರು. ಇವರು ಎಂಎ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಿಂದ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ. ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರಾಣ ಚಾರಿತ್ರಿಕ ವಾಸ್ತವ ಎಂಬ ವಿಷಯದ ಮೇಲಿನ ಅಧ್ಯಯನಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ. ಕವಿರಾಜಮಾರ್ಗ-ಬಹುಶಿಸ್ತೀಯ ಅಧ್ಯಯನ ಕುರಿತ ಸಂಶೋಧನೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ. ಕಾವ್ಯ, ಕಥೆ, ನಾಟಕ, ವಿಮರ್ಶೆ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಹಲವಾರು ಕೃತಿಗಳು ಇವರ ...

READ MORE

Related Books