ಜ್ಞಾನಧಾರೆ

Author : ಸಿ.ಆರ್. ಸುರೇಶ್ (ಚೌಡ್ಲಾಪುರ ಸೂರಿ)

Pages 222

₹ 299.00




Year of Publication: 2023
Published by: ಆರ್‌.ಕೆ ಪ್ರಕಾಶನ
Address: ಚೌಡ್ಲಾಪುರ ಕಡೂರು ತಾ. ಚಿಕ್ಕಗಳೂರು ಜಿಲ್ಲೆ
Phone: 9480106926

Synopsys

’ಜ್ಞಾನಧಾರೆ’ ವಿದ್ಯಾರ್ಥಿ ಬದುಕಿನ ಕನ್ನಡಿ ಸಿ.ಆರ್‌ ಸುರೇಶ್‌ ಮತ್ತು ಪರುಶುರಾಮ್‌ ವೈ. ಶಿರಗುಪ್ಪಿ ಬರೆದಿರುವ ಕೃತಿಯಾಗಿದೆ. ಸರ್ಕಾರದ ಮೊರಾರ್ಜಿ, ಏಕಲವ್ಯ, ಕಿತ್ತೂರುರಾಣಿ, ಅಟಲ್ ಬಿಹಾರಿ, ಅಂಬೇಡ್ಕರ್ ವಸತಿ ಶಾಲೆ ಹಾಗೂ ಆದರ್ಶ ಶಾಲೆಗಳ ಪ್ರವೇಶ ಪರೀಕ್ಷೆಗೆ ಈ ಪುಸ್ತಕದಲ್ಲಿ ವಿಷಯವಾರು ಹಾಗೂ ಘಟಕವಾರು ಕೇಳಬಹುದಾದ ಪ್ರಶ್ನೆಗಳನ್ನು ತುಂಬಾ ಸರಳವಾಗಿ ನೀಡಲಾಗಿದೆ. ಪ್ರತಿ ಪಾಠದಿಂದ ಎಷ್ಟು ಪ್ರಶ್ನೆಗಳನ್ನು ರಚಿಸಲು ಸಾಧ್ಯವಾಗುತ್ತದೆಯೋ ಅಷ್ಟು ಪ್ರಶ್ನೆಗಳನ್ನು ರಚನೆ ಮಾಡಲಾಗಿದೆ. ಇಲ್ಲಿ ಗಮನಿಸಬಹುದಾದ ಮತ್ತೊಂದು ಅಂಶವೆಂದರೆ ಪರೀಕ್ಷೆಯಲ್ಲಿ ಪರಿಸರ ಅಧ್ಯಯವನ್ನು ವಿಜ್ಞಾನ ಹಾಗೂ ಸಮಾಜ ವಿಜ್ಞಾನವಾಗಿ ಪ್ರತ್ಯೇಕಿಸಿ ನೀಡಲಾಗಿದೆ. ಅಲ್ಲದೇ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ತಕ್ಕಂತೆ ಈ ಕೈಪಿಡಿಯನ್ನು ರಚಿಸಲಾಗಿದೆ.

About the Author

ಸಿ.ಆರ್. ಸುರೇಶ್ (ಚೌಡ್ಲಾಪುರ ಸೂರಿ)

ಲೇಖಕ ಸುರೇಶ್.ಸಿ.ಆರ್ (ಕಾವ್ಯನಾಮ: ಚೌಡ್ಲಾಪುರ ಸೂರಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚೌಡ್ಲಾಪುರ ಗ್ರಾಮದವರು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೋಟೆಹಾಳು ಕೆ. ಸೂಗೂರು ಅಂಚೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು. ಎಂ.ಎ. ಬಿ.ಇಡಿ.ಡಿ.ಇಡಿ. ಎಂ.ಎ. ಪದವೀಧರರು. ಸಮಾಜ ವಿಜ್ಞಾನ ವೇದಿಕೆ ಕವಿಬಳಗ ಜಿಲ್ಲಾ ಘಟಕದ ಬಳ್ಳಾರಿ ಜಿಲ್ಲಾ ಅಧ್ಯಕ್ಷರು, ಸಾಮಾಜಿಕವಾಗಿ ಜನಜಾಗೃತಿಯ, ಪರಿಸರ ಸಂರಕ್ಷಣೆಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇವರು ಬರೆದ ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಬಹುಮಾನ-ಪ್ರಶಸ್ತಿಗಳನ್ನು ಪಡೆದಿವೆ. ಗರಿ ಮೂಡಿತು-ಇವರ ಮೊದಲ ಕವನ ಸಂಕಲನ.  ಪ್ರಶಸ್ತಿಗಳು: ಅಕ್ಷರ ರತ್ನ, ಸೇವಾ ರತ್ನ. .ಕರುನಾಡು ಸೇವಾರತ್ನ ಪ್ರಶಸ್ತಿ..ಕುವೆಂಪು ಪ್ರಶಸ್ತಿ. ...

READ MORE

Related Books