ನಾಝಿ ನರಮೇಧ

Author : ಗಿರೀಶ ಜಕಾಪುರೆ

Pages 240

₹ 225.00




Year of Publication: 2017
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಬಸವನಗುಡಿ, ಬೆಂಗಳೂರು-04
Phone: 080-26627100

Synopsys

ಹಿಟ್ಲರ್ ಬೆಳೆದದ್ದೇ ಜ್ಯೂಗಳನ್ನು ದ್ವೇಷಿಸುತ್ತ. ಜ್ಯೂದ್ವೇಷ ಅವನ ನರನಾಡಿಗಳಲ್ಲಿ ತುಂಬಿತ್ತು. ಜರ್ಮನ್‌ರು ಬಡವರಾಗರುವುದನ್ನು ಹಾಗೂ ಜ್ಯೂಗಳು ಶ್ರೀಮಂತರಾಗಿರುವುದನ್ನು ಆತ ಚಿಕ್ಕಂದಿನಿಂದಲೂ ಗಮನಿಸುತ್ತ ಬಂದಿದ್ದ. ಈ ವಿರೋಧಾಭಾಸವೇ ಅವನಲ್ಲಿ ಜ್ಯೂಗಳು ಜರ್ಮನ್‌ರ ಶತ್ರುಗಳು, ಜರ್ಮನ್‌ರ ಬಡತನಕ್ಕೆ ಜ್ಯೂಗಳೇ ಕಾರಣರು ಎಂಬುದನ್ನು ಅಚ್ಚೊತ್ತಿತ್ತು. ಹಿಟ್ಲರ್ ಜ್ಯೂಗಳು ಜರ್ಮನಿಯಲ್ಲಿ ಬದುಕು ಕಟ್ಟಿಕೊಂಡು, ನೌಕರಿಗಳನ್ನು ಗಿಟ್ಟಿಸಿಕೊಂಡು, ಅಂಗಡಿಗಳನ್ನು, ಉದ್ಯೋಗಗಳನ್ನು ಆರಂಭಿಸಿ ಸಂಪತ್ತು ಸಂಪಾದಿಸಿದ್ದಾರೆ, ಆದರೆ ಇವರು ನಮ್ಮ ಭಾಷೆ ಕಲಿಯುವುದಿಲ್ಲ, ನಮ್ಮ ಸಂಸ್ಕೃತಿ ಅಳವಡಿಸಿಕೊಳ್ಳುವುದಿಲ್ಲ. ನಮ್ಮ ದೇಶವನ್ನು ತಮ್ಮ ದೇಶ ಎಂದುಕೊಳ್ಳುವುದಿಲ್ಲ. ಹೀಗಿರುವಾಗ ಅವರೇಕೆ ಇಲ್ಲಿ ಇರಬೇಕು ಎಂಬ ಪ್ರಶ್ನೆ ಎತ್ತಿದ ಹಾಗೂ ಜ್ಯೂಗಳ ಸರ್ವನಾಶಕ್ಕೆಂದು ಪಣತೊಟ್ಟ. ಆರ್ಥಿಕ, ರಾಜಕೀಯ, ಸಾಮಾಜಿಕ ಬೆಂಬಲಗಳಿಲ್ಲದೆ ಆತ ಅಷ್ಟೊಂದು ಕಡಿಮೆ ಅವಧಿಯಲ್ಲಿ ಅಷ್ಟೊಂದು ಬಲಶಾಲಿಯಾಗುವುದು ಹೇಗೆ ಸಾಧ್ಯವಾಯಿತು? ಅವನಿಗೆ ತೆರೆಯಮರೆಯಿಂದ ಸಹಕರಿಸಿದವರು ಯಾರು? ಅವನ ಉಪಾದ್ವ್ಯಾಪಗಳಿಗೆಲ್ಲ ಬೇಕಾಗುತ್ತಿದ್ದ ಹಣವನ್ನು ಪೂರೈಸಿದ್ದು ಯಾರು? ಜ್ಯೂಗಳ ಸಂಹಾರ ನಿಜಕ್ಕೂ ಯಾರ ಉದ್ದೇಶವಾಗಿತ್ತು? ಹಿಟ್ಲರ್ ಅರವತ್ತು ಲಕ್ಷ ನಿರಾಪರಾಧೀ ಜ್ಯೂಗಳನ್ನು ಕೊಂದ. ಜ್ಯೂಗಳ ವಂಶ ನಿರ್ನಾಮ ಮಾಡಿದ. ಈ ಘೋರ ನರಸಂಹಾರ ಪ್ರಾರಂಭವಾದುದು ಹೇಗೆ? ಎಲ್ಲಿ? ಯಾವ ರೀತಿಯಲ್ಲಿ ಜ್ಯೂಗಳನ್ನು ನಾಶಮಾಡಲಾಯಿತು? ಈ ಹಿಂಸಾಕಾಂಡ ಅಂತ್ಯ ಹೇಗಾಯಿತು? ಕೊಂದವರ ಗತಿ ಏನಾಯಿತು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಈ ಪುಸ್ತಕದಲ್ಲಿದೆ.  

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Awards & Recognitions

Related Books