5 ಅಜ್ಞಾತ ನಾಗರಿಕತೆಗಳು

Author : ರೋಹಿತ್ ಚಕ್ರತೀರ್ಥ

Pages 184

₹ 200.00




Year of Publication: 2022
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

ಆಫ್ರಿಕದ ಒಲ್‌ಮೆಕ್, ಆಕ್ಸುಮ್, ಅಮೆರಿಕದ ಅನಸಾಝಿ, ಯುರೋಪಿನ ಕಾರ್ಥೇಜ್ ಮತ್ತು ವೈಕಿಂಗ್ – ಈ ಐದು ನಾಗರಿಕತೆಗಳನ್ನು ಪರಿಚಯಿಸುವ ಕೃತಿ ಲೇಖಕ ರೋಹಿತ್ ಚಕ್ರತೀರ್ಥ ಅವರ ‘5 ಅಜ್ಞಾತ ನಾಗರಿಕತೆಗಳು’. ಸಮಗ್ರವಾಗಿ ನಾಗರಿಕತೆಯನ್ನು ಕಟ್ಟಿಕೊಡುವ ಈ ಕೃತಿ, ಕಥಾನಕ ರೂಪದಲ್ಲಿ ವಿಚಾರವನ್ನು ಪ್ರಸ್ತುತಪಡಿಸುತ್ತದೆ. ನಾಗರಿಕತೆ ಎಂದಾಗೆಲ್ಲ ನೆನಪಿಗೆ ಬರುವ ಗ್ರೀಕ್, ರೋಮನ್, ಈಜಿಪ್ಟ್, ಬ್ಯಾಬಿಲೋನಿಯನ್ ಮುಂತಾದ ಹೆಸರುಗಳನ್ನು ಹೊರತುಪಡಿಸಿ ಜನಸಾಮಾನ್ಯರಿಗೆ ಗೊತ್ತೇ ಇಲ್ಲದ ನಾಗರಿಕತೆಗಳನ್ನು ಇಲ್ಲಿ ಪರಿಚಯಿಸಲಾಗಿದೆ. ನಾಗರಿಕತೆಗಳಲ್ಲಿ ಆಳಿದ ರಾಜರ ಕತೆಗಳಲ್ಲದೆ ಜನಸಾಮಾನ್ಯರ ಬದುಕಿನ ವಿವರಗಳೂ ಇಲ್ಲಿ ಲಭ್ಯ. ಜನರ ಧೈರ್ಯಸಾಹಸಗಳು, ಛಲಬಿಡದೆ ಕಾರ್ಯ ಸಾಧಿಸುವ ಗುಣ ಓದುಗರಿಗೆ ಸ್ಫೂರ್ತಿದಾಯಕ.

About the Author

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ.  ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...

READ MORE

Related Books