ಯೂರೋಪಿಯನ್‌ ವಿಮರ್ಶೆಯ ಇತಿಹಾಸ

Author : ಶಂಕರ್ ಮೊಕಾಶಿ ಪುಣೇಕರ್

Pages 134

₹ 35.00




Year of Publication: 2004
Published by: ಪ್ರಸಾರಾಂಗ ಬೆಂಗಳೂರು
Address: ಬೆಂಗಳೂರು ವಿಶ್ವವಿದ್ಯಾಲಯ

Synopsys

ಯೂರೋಪಿಯನ್‌ ವಿಮರ್ಶೆಯ ಇತಿಹಾಸ ಶಂಕರ ಮೊಕಾಶಿ ಪುಣೇಕರ ಅವರ ಐತಿಹಾಸಿಕ ಕೃತಿಯಾಗಿದೆ. ಈ ಕೃತಿಯು 1985 ರಲ್ಲಿ ಮೊದಲ ಮುದ್ರಣಗೊಂಡು 2004 ರಲ್ಲಿ ಮರುಮುದ್ರಣಗೊಂಡಿದೆ. ಈ ಕೃತಿಯು ಪ್ರಾಜ್ಞ ಪ್ರಾಚೀನ ಯುಗ, ಮಧ್ಯ ಯುಗೀನ ವಿಮರ್ಶೆ, ಪುನರುಜೀವನ ಯುಗ, ನವ ಪ್ರಾಜ್ಞತೆ , ಇಗ್ಲೆಂಡಿನಲ್ಲಿ ನವಪ್ರಾಜ್ಞ ಸಾಹಿತ್ಯ ವಿಮರ್ಶೆ, ರೋಮ್ಯಾಂಟಿಕ್‌ ಯುಗ , ರೊಮ್ಯಾಂಟಿಕ್ ವಿಮರ್ಶೆ ಇಂಗ್ಲಿಷ್ ರೊಮ್ಯಾಂಟಿಕ್ ಯುಗ, ಇಂಗ್ಲೆಂಡಿನ ವಿಕ್ಟೋರಿಯನ್ ಯುಗ ಸೇರಿದಂತೆ ಒಟ್ಟು 14 ಪರಿವಿಡಿ ಭಾಗಗಳನ್ನು ಹೊಂದಿದೆ.

About the Author

ಶಂಕರ್ ಮೊಕಾಶಿ ಪುಣೇಕರ್
(08 May 1928 - 11 August 2004)

ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ ಕಾಲ ವಿಜಾಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪಡೆದರು. ಬೆಳಗಾವಿಯ ಆರ್.ಪಿ.ಡಿ.ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು, ಐ.ಐ.ಟಿಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1988ರಲ್ಲಿ ನಿವೃತ್ತಿಯ ನಂತರ ಮೂರು ವರ್ಷಗಳ ಕಾಲ ಶ್ರೀ ಸತ್ಯಸಾಯಿಬಾಬಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.  ಕನ್ನಡ ಮತ್ತು ಇಂಗ್ಲಿಷ್ ...

READ MORE

Related Books