ಜಗತ್ತಿನ ಮಹಾನ್ ನಾಗರಿಕತೆಗಳು

Author : ಡಿ.ಎಸ್. ಲಿಂಗರಾಜು

Pages 192

₹ 190.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 0802216 1900,

Synopsys

ಲೇಖಕ ಡಿ.ಎಸ್. ಲಿಂಗರಾಜು ಅವರ ಕೃತಿ-ಜಗತ್ತಿನ ಮಹಾನ್ ನಾಗರಿಕತೆಗಳು. ಸಿಂಧೂ ನಾಗರಿಕತೆ, ಹರಪ್ಪ ಮಹೆಂಜದಾರೊ ನಾಗರಿಕತೆ ಸೇರಿದಂತೆ ಜಗತ್ತಿನ ನಾಗರಿಕತೆಗಳು ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲುಗಳಾಗಿವೆ. ಇಂತಹ ನಾಗರಿಕತೆಯ ಬೆಳಕಿನಲ್ಲೇ ಸಂಸ್ಕೃತಿಗಳು ಬೆಳಗಿವೆ. ಇತಿಹಾಸ, ಸಾಮಾಜಿಕತೆಗಳ ಅಧ್ಯಯನಗಳಾಗಿವೆ. ಇತಿಹಾಸವನ್ನು ಅರಿಯಲು ಹಾಗೂ ವರ್ತಮಾನದೊಂದಿಗೆ ಭವಿಷ್ಯದುದ್ದಕ್ಕೂ ತಮ್ಮತನವನ್ನು ಉಳಿಸಿಕೊಂಡು ಬರಲು ಈ ನಾಗರಿಕತೆಗಳು ಸಹಾಯಕವಾಗುತ್ತವೆ. ಈ ಹಿನ್ನೆಲೆಯಲ್ಲಿ, ಜಗತ್ತಿನ ಮಹಾನ್ ನಾಗರಿಕತೆಗಳ ಪರಿಚಯದ ಅಗತ್ಯ ಹಾಗೂ ಅನಿವಾರ್ಯ. ಸಾಮಾನ್ಯ ಆಸಕ್ತರಿಗೂ ಇತಿಹಾಸದ ವಿದ್ಯಾರ್ಥಿ-ಶಿಕ್ಷಕರಿಗೂ ತುಂಬಾ ಉಪಯುಕ್ತವಾದ ಕೃತಿ ಇದು.

ಹೊಸದಿಗಂತಗಳ ಹುಡುಕಾಟದಲ್ಲಿ ಆದಿಮಾನವನ ವಲಸೆ, ಅಟ್ಲಾಂಟಿಸ್ ಕಥಾನಕ, ನಾಗರಿಕತೆಗಳ ತೊಟ್ಟಿಲು -ಮೆಸಪೋಟೆಮಿಯ, ಈಜಿಪ್ತ್  ಎಂಬ ಮಾಯಾಲೋಕ, ನೋಕ್ ನಾಗರಿಕತೆ, ಆಸ್ಟ್ರೇಲಿಯನ್ ಬುಕ್ ಮ್ಯಾನ್ ಕಥನಗೀತೆ, ಪೇರುವಿನ ಸಾನ್ನಿಧ್ಯದಲ್ಲಿ ಹಾಗೂ ಸಾವಿರದ ನದಿಯ ನಿಗೂಢ ರಹಸ್ಯ ಹೀಗೆ ವಿವಿಧ ಆದ್ಯಾಯಗಳನ್ನು ಈ ಕೃತಿಯು ಒಳಗೊಂಡಿದ್ದು, ಜಗತ್ತಿನ ರಹಸ್ಯಮಯ ನಾಗರಿಕತೆಗಳ ಹಾಗೂ ನಿಗೂಢತೆಗಳನ್ನು ಅನಾವರಣಗೊಳಿಸುತ್ತದೆ. 

About the Author

ಡಿ.ಎಸ್. ಲಿಂಗರಾಜು

ಲೇಖಕ ಡಿ.ಎಸ್. ಲಿಂಗರಾಜು, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು, ಮಾಯಸಂದ್ರದವರು. ತಂದೆ- ಡಿ.ಎಸ್. ಶಿವರಾಜೇಗೌಡ, ತಾಯಿ- ಬಿ.ಕೆ ಜಯಮ್ಮ. ಮಾಯಸಂದ್ರ, ತುರುವೇಕೆರೆ, ಕೋಲಾರ ಮತ್ತು ಚುಂಚನಗಿರಿಯಲ್ಲಿ ವಿದ್ಯಾಭ್ಯಾಸ. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ ಎ ಪದವಿ (1985), ಕೆಲಕಾಲ ಕುಣಿಗಲ್ ತಾಲೂಕು ಎಡೆಯೂರಿನ ಕಾಲೇಜೊಂದರಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ. ನಂತರ ಕೆಎಎಸ್ ಗೆಜೆಟೆಡ್ ಪರೀಕ್ಷೆಯಲ್ಲಿ ಆಯ್ಕೆಯಾಗಿ 1991 ರಿಂದ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ, ಪ್ರಸ್ತುತ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಕಾಲಿಸುತ್ತಿದ್ದಾರೆ. ತುಷಾರ ಮಾಸ ಪತ್ರಿಕೆಯ ದೇಶ-ವಿದೇಶಗಳ ಪರಿಚಯ ಮಾಲೆಯಲ್ಲಿ ಸುಮಾರು ...

READ MORE

Related Books