Poem

ಅಮರ ಪ್ರೇಮಗೀತೆ

ನಿನ್ನದೆ ಕೀರ್ತನ
ನಿನ್ನದೆ ಪ್ರಾರ್ಥನ
ನೂರಾರು ಜಂಜಡಗಳಂಡಿಯಲೂ

ನಿನ್ನದೆ ರಿಂಗಣ
ನಿನ್ನದೆ ಸಮೀಕರಣ
ನೀನೇ ಮನದೊಳಗಿನ ‌ಹೊಂಬೆಳಕು
ಇದು ಮೋಹವ ಇಲ್ಲವೇ ಮೋಹಕದ ಪ್ರೇಮದೀಪ್ತನ

ನಿನ್ನದೆ ದಿಗ್ದರ್ಶನ
ಹೊತ್ತು ಹೊತ್ತಿಗೆ ನಿನ್ನ ಬಾವಬಿಂಬನದ
ಪ್ರೇಮಪ್ರಣತೆಯ‌ ಚೆಲುವಿನ ಚಿತ್ತಾರ

ಹೃದ್ಯಸ್ವರದಲಿ ನಿನ್ನ ಹೆಜ್ಜೆಯ ಪಟವ
ನಿನ್ನ ಕಂಗಳ ಸುಳಿಯಲಿ ಜಾರಿದ ಪ್ರೇಮಾಚಾರಿ

ಒಲವಿನ ಹೃದ್ಯದ ಪದ್ಯದ ತರುಲತೆ
ನಿನ್ನ ಪದಸುಮಗಳ ಆರಾಧಕ
ಸಪ್ತ ಕಾಮನಬಿಲ್ಲುಗಳ ಹೂನಗೆ
ಚಂದನದ ನನ್ನೆದೆಯ ಧ್ಯಾನದ ಹೂಬನ

---------------

ಮಧುರ ಪ್ರೇಮಗೀತೆಯ ದೀಪ್ತಿ. ಒಲವಿನ ಹೃದ್ಯದ ಹಾಡಿನ ಸಂಗೀತಾ ಹೃನ್ಮನಗಳ ಪುಳಕಗೊಳ್ಳಿಸುವ ಅರ್ಚನೆ.
ಇದು ಅನನ್ಯ ಅಕ್ಷರಗಳಿಂದ ಸಲ್ಲಿಸಿದ ಅಮರ ಪ್ರೇಮಗೀತೆ....! ಏನಂತೀರಾ.....? ನಿಮ್ಮ ಕಾವ್ಯಸೇವಕ ಸಂತೋಷ ಕಾಖಂಡಕಿ.

 

 

 

 

 

 

ಸಂತೋಷ ಕಾಖಂಡಕಿ

ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು  ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.

ಪ್ರಶಸ್ತಿಗಳು: ರಾಷ್ಟ್ರೀಯ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

More About Author