Poem

ಆಂತರ್ಯದೊಳಗಿನ ನೋವಿನ ಮೂಕ ಭಾವಗೀತೆ

ಹೇ ಕಾವಲುಗಾರ
ದಯೆ ತೋರು ನನ್ನ ಮೇಲೆ ಈಗ
ನಾನು ದಯೆಯ ಮೋಹದಲಿರುವೇ

ಕೊಲುವ ಮುನ್ನ ನೀ ಅರಿಯೋ
ಮಾನವತ್ವದ ನೀತಿ ಮಾನವ.
ಬದಿಗೆ ಎತ್ತಿ ಇಡು ಅವುಡುಗಚ್ಚುವುದನು

ಭಾವಪ್ರಣತೆನ್ನಾದರೂ ಉಂಡಿದ್ದರೆ
ಗೊತ್ತಾಗುತ್ತಿತ್ತು ಕ್ರೋಧ ನೋವಿನ ಬೆಲೆ
ನಿತ್ಯ ಬೆಂಕಿಯ ಬಲೆ ಅಲೆದಾಡುವವ ನಾನು
ನಿನಗೆಲ್ಲಿ ಅರಿವಿರಬೇಕು ಸುಖದ ಔತಣವನು ಉಣ್ಣುವವ ನೀನು

- ಸಂತೋಷ ಕಾಖಂಡಕಿ

--------

ಇದು ನಿತ್ಯ ಪ್ರಾಣಿಗಳ ಕವಿತೆ.. ಆಂತರ್ಯದೊಳಗಿನ ನೋವಿನ ಮೂಕ ಭಾವಗೀತೆ. ಸಿರಿಯೋ ಪರಿಯೋ ತನ್ನಷ್ಟಕ್ಕೆ ತಾನೆ ಇದ್ದರೂ ಬಿಡದ ಕುಲಮಾನವರಿಗೆ ಶಾಪ ನೀಡುವ ಉಸಿರಾಡಲು ಕಷ್ಟ ಮೂಕ ವೇದನೆಯನ್ನು ನುಂಗಿಕೊಂಡಿರು ಪ್ರಾಣಿಗಳ ಭಾವಶಾಂತತೆ ಇಲ್ಲದಂತಾಗುತ್ತಿದೆ ಏನಂತಿರಾ...? ಪ್ರೀತಿಯಿಂದ ಸಂತೋಷ ಕಾಖಂಡಕಿ ( ಎಲೈ ಚಿಗುರೇ)

ಸಂತೋಷ ಕಾಖಂಡಕಿ

ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು  ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.

ಪ್ರಶಸ್ತಿಗಳು: ರಾಷ್ಟ್ರೀಯ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

More About Author