Poem

ಬಾಳಂದ್ರ ಹ್ಯಾಂಗ್ ಬಾಳಲವ್ವ

ಮನ್ಯಾಗ ತಟ್ಟಿದ ರೊಟ್ಟಿ ಬ್ಯಾಡ್ ಅಂತಾನ
ಬಾಯಿ ರುಚಿಯ ಬೆನ್ನತ್ತಿ ಖಾನಾವಳಿ ಹುಡುಕ್ಯನ
ಬಾಳಂದ್ರ ಹ್ಯಾಂಗ್ ಬಾಳಲವ್ವ ಇವನ ಕೂಡ

ದಣಿವ ಇದ್ರೂ ಹಾಸಿಗಿಯಗ ಅವ್ನಾಟಕ ಕುಣಿದೆನ
ಚಪಲ ತೀರದಂತ ಇಟ್ಕೊಂಡಾಕಿ ಕೂಡಿ ಹೋಗ್ಯಾನ
ಬಾಳಂದ್ರ ಹ್ಯಾಂಗ್ ಬಾಳಲವ್ವ ಇವನ ಕೂಡ

ಬೆವರ ದುಡಿದು ಮಾಡಿನಿ ಮನಿ ಪಾತ್ರಿ ಪಗಡಿನ
ದಿನಕ್ಕೊಂದು ಕದ್ದು ಮಾರಿ ಬಾರಿಗಿ ಹೊಂಟಾನ
ಬಾಳಂದ್ರ ಹ್ಯಾಂಗ್ ಬಾಳಲವ್ವ ಇವನ ಕೂಡ

ಎರಡ ಸಾಕಂದ್ರ ಗಂಡ್ ಬೇಕಂತ ನಾಕ್ ಮಕ್ಕಳ ಕೈಗಿಟ್ಟನ
ವಿಧಿವಿರಿಗ್ ಬಾಳ್ ಕೊಡ್ತೆನಂತ ಹೆಂಗ್ಸರ್ ಸೆರಗ ಹಿಡಿದ ಸುತ್ತಾನ
ಬಾಳಂದ್ರ ಹ್ಯಾಂಗ್ ಬಾಳಲವ್ವ ಇವನ ಕೂಡ

ಶರೆ ಕುಡ್ ದ ತೂರಾಡ್ತಾನಂತ ಹಿಡಿಯಾಕ್ ಹೋದ್ರ ನನಗ ಹೊಡಿತಾನ
ಮೋರಿ ತೊಯ್ದ ಬಂದ್ ನನ್ ಮ್ಯಾಗ ಉಗುಳ್ತನ
ಬಾಳಂದ್ರ ಹ್ಯಾಂಗ್ ಬಾಳಲವ್ವ ಇವನ ಕೂಡ

ಯಾವನ ಜೋಡಿ ಮಕ್ಕೊಂಡ್ ಗಂಡ್ ಬೀಜಿಲ್ದ ಹೆಣ್ಣ ಹೇತ್ತಿ ಹೊಲಸ್ ಅಂತಾನ
ಹೆತ್ತಿರೋ ಹೆಣ್ ಕುಡಿನ ಮದುವಿ ವ್ಯಾಪರಕ್ ಹಚ್ಚಾನ
ಬಾಳಂದ್ರ ಹ್ಯಾಂಗ್ ಬಾಳಲವ್ವ ಇವನ ಕೂಡ

ತಾಳಿಗಾಗಿ ನಾ ಎಲ್ಲಾನೂ ಸಹಿಸಿನಿ ಕಷ್ಟ ಆದ್ರೂ ನ ಅವನ್ ಜೋಡಿನ್ ಬದ್ಕಿನಿ
ನನ್ನಂಗ ನನ್ ಹೆಣ್ಣ ಕೂಸು ಅಗಾಕ ನಾ ಹ್ಯಾಂಗಾರ ಬಿಡಲವ್ವ
ಬಾಳಂದ್ರ ಹ್ಯಾಂಗ್ ಬಾಳಲವ್ವ ಇವನ ಕೂಡ

ಕುಡುಕ ಗಂಡನ ಕೂಡ ನನ್ ಬಾಳ್ವೆ ಸಾಕಿನ್ನ ಅಬಲೆ ಆಗಿ ನಾ ದಿನವೂ ಸೋತಿನವ್ವ
ಈಗ ಸರ್ದಿ ನನ್ ಮಗಳದ್ದ ಆಗ್ಯದ ಆಕಿನ ಅಬಲೆ ಮಾಡದಂಗ ವಿದ್ಯನ ಕೊಟ್ಟ ಸಬಲೆ ಮಾಡ್ತಿನವ್ವ
ಇವನ ಕೂಡ ಇನ್ ಬಾಲಂಗಿಲ್ಲೇವ್ವ
ಕ್ಷಮಿಸಿ ಬಿಡ ನನ್ನವ್ವ ನೀ ಹಾಕಿದ ಗೆರಿ ದಾಟಿ ನ ಸಬಲೆ ಅಗಾಕ್ ಹೊಂಟೆನ ನನ್ ಕ್ಷಮಿಸಿ ಬಿಡೆಯವ್ವ.

ಎಂ.ಎನ್. ನೇಹಾ ಹೊನ್ನಾವರ

ಎಂ.ಎನ್. ನೇಹಾ ಅವರು ಮೂಲತಃ ಹೊನ್ನಾವರದವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವ್ಯ, ಲೇಖನಗಳ ಬರವಣಿಗೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಈ ದಿನ, ಬುಕ್ ಬ್ರಹ್ಮ ಸೇರಿದಂತೆ ಸಾಹಿತ್ಯ ಜಾಲತಾಣಗಳಲ್ಲಿ ಅವರ ಲೇಖನ ಹಾಗೂ ಕವಿತೆಗಳು ಪ್ರಕಟವಾಗಿರುತ್ತವೆ.

More About Author