Poem

ಗುರು ನಾರಾಯಣ

ಸಮಾಜ ಸುಧಾರಕ ದೇವರ ಪ್ರತೀಕ
ನಿಮ್ಮ ಆಜ್ಞೆಗಳ ಪಾಲಿಸುವ ಸೇವಕ
ಜಾತಿ ಮತ ಧರ್ಮ ಭೇದವಿಲ್ಲದ ಕಾಯಕ
ತಾರತಮ್ಯ ತೊರೆದು ಉದಯೋನ್ಮುಖಿ ನಾಯಕ

ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡು
ವರ್ಗವಾರು ಜನಾಂಗದ ಸ್ತ್ರೀಸಾಮಾನ್ಯರ ಶೋಷಣೆ ಕಾಡು
ಜಾತೀಯತೆ, ಅಸ್ಪ್ರಶ್ಯತೆ ವಿಷ ವೃಕ್ಷದ ಉಸಿರುಗಟ್ಟಿನ ಜಾಡು
ಭಾರತದಲ್ಲಿಯೇ ಕಂಡರಿಯದ ಅಮಾನುಷ ವರ್ತನೆಯ ಬೀಡು

ಬಸವಣ್ಣ ಶಂಕರಚಾರ್ಯ ಸಿದ್ಧಾಂತಗಳ ಅಳವಡಿಕೆ
ಗೊಂದಲಗಳ ಹುಚ್ಚರ ಸಂತೆ, ಚಲಾವಣೆ ಬಾರದೆ ಕೇಕೆ
ಬುದ್ಧ, ಕ್ರಿಸ್ತ, ಪತಂಜಲಿಗಳಂತ ಮಾನವೀಯತೆಯ ಪೌರುಷ
ಜಾತೀಯತೆ, ಅಸ್ಪ್ರಶ್ಯತೆ ತೊಳೆದ ಅವತಾರ ಪುರುಷ

ಗುಹೆ, ಪರ್ಣಗಳಲ್ಲಿ ತಪಸ್ಸು, ಸಂಸ್ಕೃತದಲ್ಲಿ ಅದ್ವಿತೀಯರು
ಜಾತಿ ಮತ ದೇವರು ಒಂದೇ ಎಂದವರು...
ಅಸ್ಪೃಶ್ಯತೆಯ ಪಿಡುಗನ್ನು ಬುಡ ಸಮೇತ ಕಿತ್ತೊಗೆದರು
ದೇಶಸೇವೆಯೇ ಈಶ ಸೇವೆಯೇ ಎಂದ ಗುರು ನಾರಾಯಣರು.

- ಕೃಷ್ಣ ಕೆ

ಕೃಷ್ಣ ಕೆ.

ಕೃಷ್ಣ ಕೆ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕವನ ಅವರ ಸಾಹಿತ್ಯ ಪ್ರಕಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕವನಗಳನ್ನು ಪ್ರಕಟಿಸಿರುತ್ತಾರೆ.

More About Author