Poem

ಹೆರಳಿಗರಳು  ಮಲ್ಲಿಗೆ 

ಬಿರಿದ ಮಲ್ಲಿಗೆ ಅರಳು
ಸಿಂಗರಿಸು ಬಾ ನನ್ನ ಹೆರಳು!
ಬಿಳುಪಿನ ಹೊಳಪು
ಕೈ ಸೋಕಲದು ಎಂತಹ ನುಣುಪು!!

ಪರಿಶುದ್ಧ ಪಕಳೆಗಳು
ಮನ ಸೋಲುವರು ಹೆಂಗಳೆಯರು!
ಸಮ್ಮೋಹಗೊಳಿಸುವ ಸೌಗಂಧ
ತುಂಬುವೆ ನೀ ಮನಕಾನಂದ!!

ಪರಿಪೂರ್ಣತೆಯ ಸಂಕೇತ
ಒಲವ ಹಂಬಲಕೆ ಅಂಕಿತ!
ಮುಡಿಗಿಡಲು ನಲ್ಲ ಮಲ್ಲಿಗೆ
ಪರವಶಳಾದೆ ನಾ ಮೆಲ್ಲಗೆ!!

ಹೆರಳಿಗರಳು ಮಲ್ಲಿಗೆ
ಹರುಷದೊಲವ ಚೆಲ್ಲಿದೆ!
ಶೃಂಗಾರದ ಸೋಪಾನ
ಮೃದು ಮಲ್ಲಿಗೆಯಿದು ಜೋಪಾನ!!

- ಬಿ.ಎಂ. ಪ್ರಮೀಳ

ವಿಡಿಯೋ
ವಿಡಿಯೋ

ಬಿ.ಎಂ. ಪ್ರಮೀಳ

ಬಿ.ಎಂ. ಪ್ರಮೀಳ ಮೂಲತಃ ಚಿಕ್ಕಮಗಳೂರಿನವರು. ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ವಾಸ್ತವ್ಯ. ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಬಾಗೇಪಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದ ಮೇಲೆ ವಿಶೇಷ ಅಕ್ಕರೆ ಮತ್ತು ಆಸಕ್ತಿಯುಳ್ಳ ಅವರು ಸುಮಾರು 300ಕ್ಕೂ ಹೆಚ್ಚು ಕವನಗಳನ್ನು ಬರೆದಿರುತ್ತಾರೆ. ಶಿಕ್ಷಣ ಮತ್ತು ಸಾಹಿತ್ಯ ಸೇವೆಗಾಗಿ ಸಾಧಕ ನಾರಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

More About Author