Poem

ಕನ್ನಡಿ ಬಲು ಬಲಶಾಲಿ

ಎಳೆದೆಳೆದು ಸೆಳೆವ ಕುಡಿಹುಬ್ಬು ಕಂಗಳು
ತುಟಿಜೇನು, ಕೆನ್ನೆ ಮೇಲಣ ಬೆಳದಿಂಗಳು
ಎಲ್ಲ ತನ್ನೊಳಗೆ ತೋರಿಯೂ ಹೇಗೆ ನಿಂತಿದೆ
ನೋಡದು, ಕನ್ನಡಿ ಬಲುಬಲಶಾಲಿಬಿಡು

ನಡುಹೊಕ್ಕಳು ಬಳುಕುವ ಸೊಂಟ
ಕಾಡಿಕಾಡಿ ಕಂಗೆಡಿಸುವ ಮೈಮಾಟ
ನೋಡಿಯೂ ಹೇಗೆ ನಿಂತಿದೆ ನೋಡದು
ಸೋತವೆಷ್ಟೋ ವಿಷಯಗಳು ಈ ಜಗದಿ
ನಿನ್ನ ಕಡು ಬಿನ್ನಾಣಕೆ
ಸೋಲೊಪ್ಪದೆ ಕಣ್ತಪ್ಪದೆ ನಿಂತಿದೆ ನೋಡದು ಕನ್ನಡಿ

ನಾನೆಂಬ ಕಲ್ಲು ಕರಗುವೆನು
ಪ್ರತೀಬಾರಿ ನಿನ್ನ ಮೆರಗಿಗೆ ಬೆರಗಾಗಿ
ಕರಗದೆ ಬೆರಗದೆ ಹೇಗೆ ನಿಂತಿದೆ ನೋಡದು
ಎದೆಮೇಲಿನ ಜಾರುಸೆರಗು
ನಡುವಲಿ ನಿಲ್ಲದಾ ಸೀರೆಯಂಚು
ಕನ್ನಡಿಯದು ಬಲುಬಲಶಾಲಿ ಬಿಡು

ಬಿಡುಬೀಸಾದ ತೋಳುಗಳು
ವಿಶಾಲ ವಿಸ್ಮಯ ಬೆನ್ನಬಯಲು
ರವಿಕೆಯೊಳಗಣ ಜೋಡಿಕಳಶ
ನಡುಕೆಳಗಿನ ಬಾಳೆಕಂಬ
ಎಲ್ಲ ತನ್ನೊಳಗೆ ತೋರಿಯೂ
ಹೇಗೆ ನಿಂತಿದೆ ನೋಡು ಕನ್ನಡಿ
ಅದು ಬಲುಬಲಶಾಲಿ ಬಿಡು

- ಜ್ಯೋತಿ ಶಾಂತರಾಜು

ವಿಡಿಯೋ

ಕಿರಣ ರೆಡ್ಡಿ

ಕಿರಣ್ ರೆಡ್ಡಿ ಅವರು ಮೂಲತಃ ಧಾರವಾಡದವರು. ಕಾವ್ಯ ಬರವಣಿಗೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ತಮ್ಮ ಹಲವಾರು ಕವನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ.

More About Author