Poem

ಕತ್ತಲಿನಲಿ ನಿನ್ನೆಯಾ ನೆನಪಿನ ಚಿರದೀಪ

ನಿನ್ನೆಯ ಬದುಕು ದುಂಬಿಯಂತೆ
ಮನಸು ಭಾವನೆತಕ್ಕ ನರಳುವುದು
ಒಲುಮೆಯ ಮಾತು ಸನಿಹಕ್ಕೆ
ಮುಚ್ಚಿದ ಕವಿತೆ ಅಗ್ನಿದಿವ್ಯಕ್ಕೆ....!

ಹುಡುಕಾಟದ ದನಿಯು ಮೌನದೊಳಿಗೆ
ದುಃಖದರಾಗ ಬರತೊಡಗಿತು ನನಗೆ
ಯಾವದೊಲಮೆ ತೀರದಾಸೆ ಕೂಗಿತೇ
ನವಿರ ನಾವಿಕಗೆ ಮೌನವರಳಿ ಆವರಿಸಿದಂತೆ....!

ನಲ್ಮೆಯ ಎದೆಯು ಅಂಬರಕೆ ಹಾರಿ
ಮುಂಗಾರದಲಿ ಪ್ರೇಮರಾಗ ಹಾಡಿದೆ
ಮಧುರ ಮುಂಜಾವು ಚುಂಬನ ಕಾಡಿತ್ತು
ಬನದ ಹೂವು ಸುರಿಸಿತು ಒಲುಮೆಗೆ ಅಪ್ಪಿ....!

"ಇದು ಮನಸ್ಸಿನ ಪುಟಗಳ ನಡುವೇ ನೆನಪಿನ ರಿಂಗಣದ ಕವಿತೆ. ಇಲ್ಲಿ ಆಳಕ್ಕಿಳಿದಷ್ಟೂ ಭಾವಸಂವೇದನ ಭಾವಗೀತೆ ಜೀವ ಜೀವಗಳ ಪ್ರೇಮ ಪುಷ್ಪ ಉಸಿರುಸಿರು ಬೆಸೆಯುವ ಕಾವ್ಯಕ್ಷರ. ಕತ್ತಲಿನಲಿ ನಿನ್ನೆಯಾ ನೆನಪಿನ ಚಿರದೀಪ ಏನಂತೀರಾ...? ನಿಮ್ಮ ಕಾವ್ಯಸೇವಕ ಸಂತೋಷ ಕಾಖಂಡಕಿ
ಎಲೈ ಚಿಗುರೇ ❤️

ಸಂತೋಷ ಕಾಖಂಡಕಿ

ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು  ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.

ಪ್ರಶಸ್ತಿಗಳು: ರಾಷ್ಟ್ರೀಯ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

More About Author