Poem

ಮಡಿಲ ಅಂಚಲಿ

ಅಮ್ಮಾ ನಿನ್ನ ಮಡಿಲ ಅಂಚಲಿ ಬೆಳೆದ ಕೂಸು ನಾನು
ತುಸು ಅತ್ತರೂ ನೀ ಮುದ್ದಿಸಿ ಬೆಳೆಸಿದ ಕಂದ ನಾನು

ಕಾರಣವಿಲ್ಲದೆ ನೀ ಹೊಡೆಯಲಿಲ್ಲ. ನನ್ನದೊಂದು ತಪ್ಪಿದ್ದರೂ ನೀ ಶಿಕ್ಷಿಸಲಿಲ್ಲ
ನಾ ಕಂಡ ಕನಸಿಗೆ ನೀ ಕಾರಣಳಾದೆ
ನಿನ್ನ ಆರಾಧಿಸುತ್ತ ನಾ ನಿನ್ನ ಮುದ್ದು ಮಗನಾದೆ

ಜನನಿ ನೀ ನನ್ನ ಮನದ ತರುಣಿ
ಎಂದಿಗೂ, ಇಂದಿಗೂ, ಮುಂದೆಂದೂ
ನೀ ನನ್ನ ಜೀವನದ ಆಶಾಕಿರಣದ ರಮಣಿ ಕಣ್ಣೀರಿನ ಭಾಷ್ಪ ಬಿದ್ದಾಗ ಬಂದು ಕರುಣೆ ತೋರಿದೆ

ಕೈಯ ತೋರಿ ಕರೆದಾಗ ಬಂದು ತಬ್ಬಿ ಪ್ರೀತಿಸಿದೆ ಹಸಿವು ಎಂದಾಗ ನೀ ಬಂದು ಹಾಲುಣಿಸಿದೆ
ಏ ತಾಯೇ ನೀನಿದ್ದರೆ ಸಾಕೆನಗೆ ನಿನ್ನನೇ ಆರಾಧಿಸುವೆ...
ಅಮ್ಮಾ, ತಾಯಿ, ಅಬ್ಬೆ ಎಂದರೂ ಸಾಲದು ನಿನಗೆ ದೇವರು, ದೇವತೆಯೆಂದೂ ಕರೆದರೆ ನನಗೆ ಇಷ್ಟವೆನಿಸಿದೆ ಹೀಗೆ...

✍🏼 ಅಶೋಕ ಪಿ ಎನ್

ಅಶೋಕ ಪಿ.ಎನ್

ಕವಿ ಅಶೋಕ ಪಿ.ಎನ್ ಅವರು ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದವರು. ವೃತ್ತಿಯಲ್ಲಿ ಸಹಶಿಕ್ಷಕ. ಪ್ರವೃತ್ತಿಯಲ್ಲಿ ಕವನ , ಹನಿಗವನ, ಚಿಕ್ಕ ಕಥೆಗಳನ್ನು ಸಹ ಬರೆಯುತ್ತಾರೆ.

More About Author