Poem

ಮನೆತನದ ಮನೆ

ಮನೆತನದ ಮನೆಯೊಂದು ಬಿಕೋ ಎನುತಿಹುದು
ತಲ್ಲಣಿಸಿ ಕೂಗುತಿಹುದು ಬಾಡುವ ತುಳಸಿ ಗಿಡವು

ಖಾಲಿಯಾದ ಪಡಸಲಿ ನೋಡಿ
ಕಂಬಗಳು ಕಂಬನಿ ಮಿಡಿಹುತಿದೆ
ಹಸುಗೂಸು ಆಡಿದ ಕಟ್ಟಿಗೆಯದು
ಕುದುರೆಯು ಜೇಡಗಟ್ಟಿ ಮೂಲೆ ಸೇರಿದೆ

ಮೇಲ ಛಾವಣಿ ಮುರಿದಿರುವುದು
ಸೋರುತಿಹುದು ಮನೆ ಇಂದು
ಜ್ಞಾನಸ್ಥನಾಗಿ ಕುಳಿತಿರುವನು ದೇವರು
ಪಾಳು ಬಿದ್ದಿದೆ ಮನೆತನದ ಮನೆ ಇಂದು

ಮನೆತನದ ಮನೆಯೊಂದು ಬಿಕೋ ಎನುತಿಹುದು
ತಲ್ಲಣಿಸಿ ಕೂಗುತಿಹುದು ಬಾಡುವ ತುಳಸಿ ಗಿಡವು

ಮರಗಿಡಗಳ ಎಲೆಗಳು ಮನೆಯಂಗಳ ಮುಂದೆ
ಪಾಚಿಕಟ್ಟಿರುಹುದು ಬಚ್ಚಲ ಮೂಲೆ ಮೂಲೆ
ಆಗಸಕ್ಕೇರಿನೆಂದು ಮೇರದ ಮನೆಯನ್ನೇ
ಮರೆತು ಹೋದಲೇ ಎಲೈ ಚಿಗುರೇ

- ಸಂತೋಷ ಕಾಖಂಡಕಿ

ಸಂತೋಷ ಕಾಖಂಡಕಿ

ಕವಿ ಸಂತೋಷ ಕಾಖಂಡಕಿ ಅವರು ಮೂಲತಃ ಬಾಗಲಕೋಟೆಯ ಜಿಲ್ಲೆಯ ಬಾದಾಮಿಯವರು. ಪ್ರೌಢಶಾಲಾ ದಿನಗಳಿಂದಲೇ ಕವಿತೆ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇಪ್ಪತ್ತುಗಿಂತ ಹೆಚ್ಚು ಕಾವ್ಯನಾಮದ ಚುಟುಕು, ಅಂಕಿತನಾಮದಿಂದ ಐದು ವಚನಗಳು ,ಇನ್ನೂರುಕ್ಕೂ ಹೆಚ್ಚು ಕವಿತೆಗಳು ,ಐದು ಕತೆಗಳು ರಚಿಸಿದ್ದಾರೆ. ಅವರು  ಪ್ರಸ್ತುತ ಪುಲಿಕೇಶಿ ಆರ್ಯವೇದಿಕ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಹಾಗೂ ಓದು ಅವರ ಆಸಕ್ತಿ ಕ್ಷೇತ್ರವಾಗಿದೆ.

ಪ್ರಶಸ್ತಿಗಳು: ರಾಷ್ಟ್ರೀಯ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ರತ್ನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

More About Author